Mangalore: ಮಂಗಳೂರಿನ ಮೋತಿ ಮಹಲ್ ಇನ್ನಿಲ್ಲ: ಆರು ದಶಕಗಳ ಇತಿಹಾಸಕ್ಕೆ ಅಂತ್ಯ ಬರೆದ ಸುಪ್ರೀಂ ಕೋರ್ಟು ತೀರ್ಪು

Mangalore: ಆರು ದಶಕಗಳ ಕಾಲ ಮಂಗಳೂರಿನ (Mangalore) ಹೃದಯ ಬಡಿತದಂತೆ ಇದ್ದ, ಹಂಪನಕಟ್ಟೆಯ ಹೆಮ್ಮೆಯಾಗಿದ್ದ ಮೋತಿ ಮಹಲ್ ಹೋಟೆಲ್ ತನ್ನ ಬಾಗಿಲು ಮುಚ್ಚುತ್ತಿದೆ.

ಮೋತಿ ಮಹಲ್ ನ ಹೋಟಲಿನ ಮಾಲಕರಿಗೆ ಹಾಗೂ ಅದರ ಜಮೀನಿನ ಮೂಲ ಮಾಲೀಕರಿಗೆ ಕಳೆದ ಹಲವು ದಶಕಗಳಿಂದ ನಡೆಯುತ್ತಿದ್ದ ಸಿವಿಲ್ ವ್ಯಾಜ್ಯದ ತೀರ್ಪು ಸುಪ್ರೀಂ ಕೋರ್ಟ್ನಲ್ಲಿ ಹೊರ ಬಿದ್ದಿದೆ. ತೀರ್ಪಿನ ಪ್ರಕಾರ, ಮೋತಿ ಮಹಲ್ ಅನ್ನು ಏಪ್ರಿಲ್ ಅಂತ್ಯದೊಳಗೆ ಅದರ ಜಮೀನಿನ ಮಾಲೀಕರಿಗೆ ಹಿಂದಿರುಗಿಸಬೇಕಾಗಿದ್ದು, 3 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕಾಗಿದೆ.ಈ ಮೂಲಕ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಪರದೆ ಬಿದ್ದಿದೆ.

Comments are closed.