Karnataka: ಕಾಡಾನೆ ಹಾವಳಿ ತಡೆಗೆ ಮೆಗಾ ಪ್ಲಾನ್: ಈಶ್ವರ ಖಂಡ್ರೆ

Karnataka: ಕರ್ನಾಟಕದಲ್ಲಿ (Karnataka) ಮಾನವ-ಆನೆ ಸಂಘರ್ಷ ಹೆಚ್ಚುತ್ತಿದ್ದು, ಈ ವರ್ಷ 45 ಜನರು ಆನೆಗಳ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ.

ಕರ್ನಾಟಕದಲ್ಲಿ ಸುಮಾರು 6395 ಕಾಡಾನೆಗಳಿವೆ. ಕಾಡಾನೆ ದಾಳಿಯಿಂದ ಕಳೆದ ವರ್ಷ 65 ಜನ ಮೃತಪಟ್ಟಿದ್ದರು. ಈ ವರ್ಷ ಕಾಡಾನೆಗಳ ದಾಳಿಗೆ 45 ಜನ ಬಲಿಯಾಗಿದ್ದಾರೆ. ಬೇಲೂರು, ಹಾಸನ ತಾಲೂಕಿನಲ್ಲಿ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಹೇಳಿದರು.

ಈಶ್ವರ್​ ಖಂಡ್ರೆ ಅವರು ದೆಹಲಿಯಲ್ಲಿ ಮಾತನಾಡಿ, ಯಾವುದೇ ಬಿಗಿ ಕ್ರಮ ಕೈಗೊಂಡರೂ ಕಾಡಾನೆ ಹಾವಳಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈಲ್ವೆ ಬ್ಯಾರಿಕೇಡ್ ಹಾಕಲು ಸರ್ಕಾರ ನಿರ್ಧರಿಸಿದ್ದೇವೆ. 392 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಹಾಕಲಿದ್ದೇವೆ. ವಿಶೇಷವಾಗಿ ಪಶ್ಚಿಮ ಘಟ್ಟಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಈ ಸಂಬಂಧ 1 ಸಾವಿರ ಕೋಟಿ ಕ್ಯಾಂಪಾ ಫಂಡ್ ನೀಡುವಂತೆ ಕೇಂದ್ರ ಸಚಿವರಿಗೆ ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

Comments are closed.