Alahabad: ನಾ.ಯಶವಂತ್‌ ವರ್ಮಾ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶರಾಗಿ ಪ್ರಮಾಣ ವಚನ!

Alahabad: ಅಪಾರ ಪ್ರಮಾಣದ ಹಣ ಪತ್ತೆಯಾದ ನಂತರ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ ತನಿಖೆ ಎದುರಿಸುತ್ತಿರುವ ನ್ಯಾಯಮೂರ್ತಿ ಯಶವಂತ್‌ ವರ್ಮಾ ಶನಿವಾರ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಆದರೆ ಆಂತರಿಕ ತನಿಖೆ ನಡೆಯುತ್ತಿರುವ ಕಾರಣ ಅವರಿಗೆ ಯಾವುದೇ ನ್ಯಾಯಾಂಗ ಕೆಲಸವನ್ನು ನಿಯೋಜಿಸಲಾಗುವುದಿಲ್ಲ. ನ್ಯಾಯಮೂರ್ತಿಗಳಿಗೆ ಆಯೋಜನೆ ಮಾಡಲಾಗುವ ಸಾರ್ವಜನಿಕ ಪ್ರಮಾಣವಚನ ಸಮಾರಂಭಗಳಿಗೆ ವ್ಯತಿರಿಕ್ತವಾಗಿ, ನ್ಯಾಯಮೂರ್ತಿ ವರ್ಮಾ ಅವರು ಖಾಸಗಿ ಕೊಠಡಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.

Comments are closed.