Bengaluru: ನನ್ನನ್ನು ಕೆಣಕಬೇಡಿ ನನ್ನ ಬಳಿ ಟನ್ ಗಟ್ಟಲೆ ದಾಖಲೆಗಲಿದೆ: ಕುಮಾರಸ್ವಾಮಿ

Bengaluru: ನನ್ನನ್ನು ಕೆಣಕಬೇಡಿ ನನ್ನ ಬಳಿ ಟನ್ ಗಟ್ಟಲೆ ದಾಖಲೆಗಲಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಯುದ್ಧ ಮಾಡುತ್ತಿದ್ದೇನೆ. ನನ್ನ ಬಳಿ ಡಿಸಿಎಂ ಡಿಕೆಶಿ ಗೆ ಸೇರಿದ ಟನ್ ಗಟ್ಟಲೆ ದಾಖಲೆ ಇದೆ. ನನ್ನನ್ನು ಕೆಣಕಿದ್ರೆ ನೆಟ್ಟಗಿರಲ್ಲ .
ನಾನು 40 ವರ್ಷದ ಹಿಂದೆ ಭೂಮಿ ಖರೀದಿಸಿದ್ದೆ. ಸರ್ಕಾರದಿಂದ ಅಧಿಕಾರಿಗಳ ದುರುಪಯೋಗ ಆಗುತ್ತಿದ್ರೆ ನಾನು ಸಿಎಂ ಆಗಿದ್ದಾಗ ಸರಿ ಮಾಡಿಕೊಳ್ತಿರಲಿಲ್ವಾ. ಸುಖಾಸುಮ್ಮನೆ ದ್ವೇಷದ ರಾಜಕಾರಣ ಮಾಡೇಡಿ.
ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು,ದರೋಡೆ ಕೆಲಸ ನಡೆಯುತ್ತಿದೆ. ಗಜನಿ ಮಹಮ್ಮದ್ ಸೇರಿ ಹಿಂದೆ ಮೂರು ಜನ ಪ್ರಮುಖರು ಇದದ್ದರು. ಅಂತಹ ವ್ಯಕ್ತಿಗಳು ಈ ಸರ್ಕಾರದಲ್ಲಿ ಇದ್ದಾರೆ. ಈ ಸರ್ಕಾರ ಬಗ್ಗೆ ಮಾತಾಡಿದ್ರೆ ನಿರಾಸೆ ಆಗಬಹುದು. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ. ನಾನು ಹೇಳುವ ವಿಷಯಗಳನ್ನ ಜನರ ಮುಂದೆ ಇಡಬಹುದು. ಈ ಸರ್ಕಾರಕ್ಕೆ ನಾನು ಸವಾಲು ಹಾಕಲು ಬಂದಿದ್ದೇನೆ ಎಂದಿದ್ದಾರೆ.
Comments are closed.