Photo contest: ದೇಖೋ ಅಪ್ನ ದೇಶ್ ಫೋಟೋ ಕಂಟೆಸ್ಟ್!

Photo contest: ಪ್ರವಾಸೋದ್ಯಮ ಇಲಾಖೆ ವತಿಯಿಂದ ‘ಡಿಸ್ಕವರ್ ದಿ ಬ್ಯೂಟಿ ಆಫ್ ಇಂಡಿಯಾ’ ಶೀರ್ಷಿಕೆಯಡಿ ದೇಖೋ ಅಪ್ನ ದೇಶ್ ಫೋಟೋ ಕಂಟೆಸ್ಟ್-2025’ (Photo contest) ಸ್ವರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರಮುಖ ಕಲೆ, ಸಂಸ್ಕೃತಿ, ಬೆಳೆ, ಧಾರ್ಮಿಕ, ಸಾಂಸ್ಕೃತಿಕ ಪಾರಂಪರಿಕ, ಕರಕುಶಲ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಪ್ರವಾಸಿ ತಾಣಗಳ ಆತ್ಯಾಕರ್ಷಕ ಛಾಯಾಚಿತ್ರಗಳನ್ನು ಸೆರೆಹಿಡಿದು ಪ್ರವಾಸಿ ತಾಣಗಳ ಕಿರು ವಿವರಣೆಯೊಂದಿಗೆ dekhoapnadeshphotos@gmail.com ಇ-ಮೇಲ್‍ಗೆ ನೇರವಾಗಿ ಕಳುಹಿಸಿಕೊಡಬಹುದು.
ಪ್ರವಾಸೋದ್ಯಮವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗಗಳ ಅಂದರೆ, ಧಾರ್ಮಿಕ, ಸಾಂಸ್ಕೃತಿಕ ಪಾರಂಪರಿಕ, ಕರಕುಶಲ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಪ್ರವಾಸೋದ್ಯಮದಿಂದ ಡಿಸ್ಕವರ್ ದಿ ಬ್ಯೂಟಿ ಆಫ್ ಇಂಡಿಯಾ ಶೀರ್ಷಿಕೆಯಡಿಯಲ್ಲಿ ‘ದೇಖೋ ಅಪ್ನ ದೇಶ್ ಫೋಟೋ ಕಂಟೆಸ್ಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮೊನೋಮೆಂಟ್, ವೈಲ್ಡ್ ಲೈಫ್,
ಜಿ ಟ್ಯಾಗ್ ಹ್ಯಾಂಡಿಕ್ರಾಪ್ಟ್ ಮತ್ತು ಹ್ಯಾಂಡ್ ಲೂಮ್ಸ್, ಲ್ಯಾಂಡ್ ಸ್ಕೇಪ್ ಮತ್ತು ಅಡ್ವೆಂಚರ್ ಈ ವಿಭಾಗಗಳಲ್ಲಿ ಅತ್ಯುತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿದು Dekhoapnadeshphotos@gmail.com ಇ-ಮೇಲ್‍ಗೆ ನೇರವಾಗಿ ಕಳುಹಿಸಲು ಎಲ್ಲಾ ಸಾರ್ವಜನಿಕರಿಗೆ ಏಪ್ರಿಲ್, 7 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಚಾರವನ್ನು ನೀಡಲು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅತ್ಯಾಕರ್ಷಕ ಛಾಯಾಚಿತ್ರಗಳನ್ನು ಸೆರೆಹಿಡಿದು, ಪ್ರವಾಸಿ ತಾಣಗಳ ಕಿರು ವಿವರಣೆಯೊಂದಿಗೆ Dekhoapnadeshphotos@gmail.com ನೇರವಾಗಿ ಕಳುಹಿಸುವಂತೆ ತಿಳಿಸುತ್ತಾ, ಈ ಸ್ಪರ್ಧೆಯಲ್ಲಿ ಸ್ಥಳೀಯ ಛಾಯಾಗ್ರಾಹಕರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಗರಿಷ್ಠ ಮಟ್ಟದಲ್ಲಿ ಸಕ್ರಿಯವಾಗಿ ಪಾಲ್ಗೊಳುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.
Comments are closed.