Kunal Kamra: ಮೋದಿ ಕುರಿತು ಜೋಕ್, ಕುನಾಲ್ ಕಾಮ್ರಾಗೆ ನಿಷೇಧ ಹೇರಿದ ಬುಕ್‌ಮೈ ಶೋ!

Kunal Kamra: ಬುಕ್ ಮೈ ಶೋ ಕುನಾಲ್ ಮೇಲೆ ನಿಷೇಧ ಹೇರಿದ್ದು, ಅವರ ಯಾವುದೇ ಶೋನ ಟಿಕೆಟ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂದು ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಿಂದ ಅಳಿಸಿ ಹಾಕಿದೆ.
ಕಾಮಿಡಿ ಶೋ ಒಂದನ್ನು ಕುನಾಲ್ ಕಾಮ್ರಾ ಇತ್ತೀಚೆಗೆ ಮಾಡಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಏಕನಾಥ್ ಶಿಂಧೆ, ನರೇಂದ್ರ ಮೋದಿ, ಅಮಿತ್ ಶಾ, ಅರವಿಂದ್ ಕೇಜ್ರಿವಾಲ್ ಕುರಿತು ಹಾಸ್ಯ ಮಾಡಿದ್ದರು. ಇದು ಸಖತ್ ವೈರಲ್ ಅಗಿತ್ತು. ವಿಡಿಯೋ ನೋಡಿ ಜನ ಧಾರಾಳವಾಗಿ ಕುನಾಲ್‌ಗೆ ಹಣ ನೀಡಿದ್ದರು. ಆದರೆ ನಂತರ ಶಿವಸೇನಾ ಬಣ ಈ ವಿಡಿಯೋ ನೋಡಿ ದಾಂಧಲೆ ಎಬ್ಬಿಸಿತ್ತು.
ನಂತರ ಶಿವಸೇನೆಯು ಪೊಲೀಸರಿಗೆ ದೂರನ್ನು ದಾಖಲಿಸಿತ್ತು. ಕಾಮ್ರಾಗೆ ಮೂರು ಬಾರಿ ಸಮನ್ಸ್ ನೀಡಲಾಗಿತ್ತು. ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದ ಕುನಾಲ್ ಕಾಮ್ರಾ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಇದರ ನಡುವೆ ಶಿವಸೇನಾದ ಯೂಥ್ ವಿಂಗ್‌ನ ಮುಖಂಡ ರಾಹುಲ್ ಕನಾಲ್, ಬುಕ್ ಮೈ ಶೋಗೆ ಪತ್ರ ಬರೆದು, ಕುನಾಲ್ ಕಾಮ್ರಾರ ಮುಂದಿನ ಶೋಗಳ ಟಿಕೆಟ್ ಅನ್ನು ಮಾರಾಟ ಮಾಡದಂತೆ ಮನವಿ ಮಾಡಿದ್ದರು.
ತನ್ನ ವೆಬ್‌ಸೈಟ್‌ನಲ್ಲಿ ದಾಖಲಾಗಿದ್ದ ಎಲ್ಲಾ ಮಾಹಿತಿಯನ್ನು ಬುಕ್‌ಮೈ ಶೋ ಅಳಿಸಿ ಹಾಕಿದೆ. ತನ್ನ ವೆಬ್‌ಸೈಟ್ ಮೂಲಕ ಈ ಶೋನ ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದು ಹೇಳಿದೆ.
Comments are closed.