Udupi: ಉಡುಪಿ: ಲವ್ ಜಿಹಾದ್ ಗೆ ಬಿಗ್ ಟ್ವಿಸ್ಟ್! ಕೋರ್ಟ್ ನಲ್ಲಿ ಸಂತ್ರಸ್ತೆ ಶಾಕಿಂಗ್ ಹೇಳಿಕೆ!

Udupi: ಉಡುಪಿಯಲ್ಲಿ (Udupi) ನಡೆದಿದ್ದ ಕ್ರಿಶ್ಚಿಯನ್ ಹುಡುಗಿಯ ಅಪಹರಣ ಪ್ರಕರಣ ಹೊಸದೊಂದು ತಿರುವನ್ನು ಪಡೆದುಕೊಂಡಿದೆ. ಈಕೆಯ ಪೋಷಕರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಿನ್ನೆ ನಡೆದಿದ್ದು ಹುಡುಗಿ ಮತ್ತು ಅಕ್ರಮ್ ತಮ್ಮ ವಕೀಲರ ಮುಖೇನ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದ್ದಾಳೆ.
ವಿಚಾರಣೆಯ ಸಂದರ್ಭ ಜೀನ ಮೆರಿಲ್ ನ್ಯಾಯಧೀಶರ ಬಳಿ ನನ್ನನ್ನು ಯಾರೂ ಕೂಡಾ ಅಪಹರಿಸಿಲ್ಲ. ನನ್ನ ಸ್ವಂತ ತೀರ್ಮಾನದಲ್ಲೇ ಅಕ್ರಮ್ ಜೊತೆ ಹೋಗಿದ್ದೇನೆ ಎಂದು ತಿಳಿಸಿದ್ದಾಳೆ.
ಇನ್ನು ತಾಯಿಯು ಮಗಳನ್ನು ತಮ್ಮ ಜೊತೆ ಕಳುಹಿಸಿ ಕೊಡುವಂತೆ ನ್ಯಾಯಧೀಶರಲ್ಲಿ ಕೇಳಿಕೊಂಡಾಗ ಹುಡುಗಿ ಒಪ್ಪಿಕೊಂಡಿಲ್ಲ. ಎಪ್ರಿಲ್ ಹತ್ತೊಂಭತ್ತರಂದು ಆತನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಿ ನಂತರ ತಾಯಿಯನ್ನು ಭೇಟಿಯಾಗುವುದಾಗಿ ತಿಳಿಸಿದ್ದಾಳೆ. ಮುಂದಿನ ವಿಚಾರಣೆಯನ್ನು ಎಪ್ರಿಲ್ 22ಕ್ಕೆ ಮುಂದೂಡಲಾಗಿದೆ.
Comments are closed.