Maharashtra : ನಾಯಿ ಬೊಗಳುವುದರಿಂದ ಕಿರಿ ಕಿರಿ – 25 ಬೀದಿ ನಾಯಿಗಳಿಗೆ ವಿಷ ಹಾಕಿಕೊಂದ ಪಾಪಿ

Maharashtra : ನಾಯಿ(Dog) ಬೊಗಳುತ್ತವೆ, idarinda ಕಿರಿ ಕಿರಿ ಎಂದು 25 ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ.
ಹೌದು, ಅಕೋಲಾ ನಗರದ ಪಕ್ಕದಲ್ಲಿರುವ ಗುಡ್ಡಿ ಪ್ರದೇಶದಲ್ಲಿ ನಡೆದಿದೆ. ತಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೀದಿ ನಾಯಿಗಳು ನಮ್ಮನ್ನು ನೋಡಿ ಬೊಗಳುತ್ತವೆ ಎನ್ನುವ ಈ ಕ್ಷುಲ್ಲಕ ಕಾರಣಕ್ಕಾಗಿ, ಅಪರಿಚಿತ ವ್ಯಕ್ತಿಯೊಬ್ಬ ಈ ಮೂಕ ಪ್ರಾಣಿಗಳಿಗೆ ವಿಷ ನೀಡಿ ಕೊಂದಿದ್ದಾನೆ. ವಿಷಪೂರಿತ ಆಹಾರವನ್ನು ಸೇವಿಸಿದ 24 ಗಂಟೆಗಳಲ್ಲಿ 25 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ, ಹಾಗೆಯೇ ಕೆಲವು ಇನ್ನೂ ಗಂಭೀರ ಸ್ಥಿತಿಯಲ್ಲಿವೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪ್ರದೇಶದ ನಿವಾಸಿಗಳು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಘಟನೆಯ ತನಿಖೆಗಾಗಿ ಸ್ಥಳೀಯರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ನಂತರ, ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Comments are closed.