Supreme Court: ಸುಪ್ರೀಂ ಕೋರ್ಟ್ ಗಾರ್ಡನ್ ನಿಂದ ಗುಲಾಬಿ ಕದ್ದ ಮಹಿಳೆ!! ಪ್ರಶ್ನೆ ಮಾಡಿದ್ದಕ್ಕೆ ಹೀಗೆ ಹೇಳೋದು?

Supreme Court: ನವದೆಹಲಿಯಲ್ಲಿ ಮಹಿಳೆಯೊಬ್ಬಳು ಸುಪ್ರೀಂ ಕೋರ್ಟ್ ಗಾರ್ಡನ್ ನಿಂದ ಗುಲಾಬಿ ಹೂವನ್ನು ಕದಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತಾಗಿ ಆ ಮಹಿಳೆಯೊಂದಿಗೆ ಪ್ರಶ್ನಿಸಿದಾಗ ಆಕೆ ಕೊಟ್ಟ ಉತ್ತರ ಎಲ್ಲರನ್ನು ದಂಗುಬಡಿಸಿದೆ.
ಹೌದು, ಮಹಿಳೆಯೊಬ್ಬಳು ಸುಪ್ರೀಂ ಕೋರ್ಟ್ ಗಾರ್ಡನ್ನಿಂದ ಗುಲಾಬಿ ಹೂವುಗಳನ್ನು ಕೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಅವಳು ಪಶ್ಚಾತ್ತಾಪ ಪಡದೆ ಮಾತನಾಡಿದ್ದು ಕೋರ್ಟಿನಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂತಹ ಅದೆಷ್ಟೋ ಪ್ರಕರಣಗಳು ತೀರ್ಪು ಹೊರಬರದೆ ಬಾಕಿ ಉಳಿದಿದೆ. ಆ ಬಗ್ಗೆ ಯಾರೂ ಮಾತಾಡುವುದಿಲ್ಲ. ಆದರೆ, ನಾನು ಹೂವು ಕೊಯ್ದಿದ್ದನ್ನೇ ಅಪರಾಧವೆಂಬಂತೆ ನೋಡುತ್ತಿದ್ದೀರಿ ಎಂದು ಆಕೆ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾಳೆ.
Comments are closed.