Waqf bill: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ – ವಕ್ಫ್ ಹಳೇ ಕಾನೂನು ಏನಿತ್ತು? ಈಗ ಹೊಸ ಕಾನೂನು ಏನಾಗಿದೆ?

Waqf bill: ಹಲವು ವಿವಾದ ಹಾಗೂ ವಿರೋಧಗಳ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿ, ಬಹುಮತಗಳಿಂದ ಅಂಗೀಕಾರ ಕೂಡ ಆಗಿದೆ. ಹಾಗಿದ್ದರೆ ವಕ್ಫ್ ಹಳೆ ಕಾನೂನು ಏನು ಹೇಳುತ್ತಿತ್ತು? ಹೊಸ ಕಾನೂನು ಏನು ಹೇಳುತ್ತೆ? ಇಲ್ಲಿದೆ ನೋಡಿ ಡೀಟೇಲ್ಸ್
ವಕ್ಫ್ ಕಾನೂನು ಹಿಂದೆ ಹೇಗಿತ್ತು?
-ಈ ಮೊದಲು ಯಾರು ಬೇಕಾದರೂ ವಕ್ಫ್ ಗೆ ಭೂಮಿ ದಾನ ಮಾಡಬಹುದಾಗಿತ್ತು. ಮುಸ್ಲಿಮರೇ ಆಗಿರಬೇಕೆಂದಿರಲಿಲ್ಲ.
-ಆಸ್ತಿ ಕುರಿತ ಯಾವುದೇ ತಕರಾರುಗಳನ್ನು ವಕ್ಫ್ ಮಂಡಳಿಯೇ ನಿರ್ವಹಿಸುತ್ತಿತ್ತು.
-ವಕ್ಫ್ ಕುರಿತ ವ್ಯಾಜ್ಯಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸುವಂತಿರಲಿಲ್ಲ
-ವಕ್ಫ್ ಗೆ ಪರಮಾಧಿಕಾರ ನೀಡಲು ಸೆಕ್ಷನ್ 40 ಜಾರಿಯಲ್ಲಿತ್ತು.
-ಭೂಮಿ ಪರಿಶೀಲನೆಗೆ ಡಿಸಿಗೆ ಸಂಪೂರ್ಣ ಅಧಿಕಾರವಿತ್ತು.
-ಮಂಡಳಿಯಲ್ಲಿ ಕೇವಲ ಒಬ್ಬ ಮುಸ್ಲಿಮೇತರ ಸದಸ್ಯನಿರಬಹುದಿತ್ತು.
-ವಕ್ಫ್ ಮಂಡಳಿ ವಶಪಡಿಸಿಕೊಂಡ ಆಸ್ತಿ ಅದರದ್ದೇ ಆಗಿತ್ತು, ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ.
ಹೊಸ ಕಾಯಿದೆಯಲ್ಲಿ ತಿದ್ದುಪಡಿ ಏನಾಗಿದೆ?
-5 ವರ್ಷ ಮುಸ್ಲಿಂ ಧರ್ಮ ಪಾಲಿಸಿದವರಿಗೆ ಮಾತ್ರ ವಕ್ಫ್ ಗೆ ದಾನ ಮಾಡಲು ಸಾಧ್ಯವಿದೆ.
-ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಇರಲಿದ್ದಾರೆ.
-ಸೆಕ್ಷನ್ 40 ರದ್ದಾಗಲಿದ್ದು, ಮಾಲಿಕತ್ವವನ್ನು ಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿರಲಿದೆ.
-ಜಿಲ್ಲಾಧಿಕಾರಿ ಬದಲು ರಾಜ್ಯಕ್ಕೆ ಪ್ರತ್ಯೇಕ ಅಧಿಕಾರ ನೇಮಕವಾಗಲಿದೆ.
-ರಾಜ್ಯಗಳು ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸಬಹುದು.
-ಗೊಂದಲಗಳಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.
ಈ ಹೊಸ ಮಸೂದೆಯಲ್ಲಿರುವ ಕೆಲವು ಅಂಶಗಳು ಅಕ್ರಮವಾಗಿ ವಕ್ಫ್ ಆಸ್ತಿಯನ್ನು ಕಬಳಿಸುವವರಿಗೆ ನಿಜಕ್ಕೂ ಅಂಕುಶ ಹಾಕಲಿದೆ. ಆದರೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಇರಲಿದ್ದಾರೆ ಎನ್ನುವುದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ.
Comments are closed.