Bengaluru : ಒಂದು ಮುತ್ತಿಗೆ 50,000 ಪೀಕುತಿದ್ದ ಸ್ಕೂಲ್ ಟೀಚರ್ ಅರೆಸ್ಟ್!!

Bengaluru : ಸಿರಿವಂತರನ್ನು ಗುರಿಯಾಗಿಸಿಕೊಂಡು ಒಂದು ಮುತ್ತು ಕೊಡಬೇಕಾದರೆ 50 ಸಾವಿರ ರೂ, ಜೊತೆಗೆ ಸುತ್ತಾಡಬೇಕಾದರೆ 15 ಲಕ್ಷಕ್ಕೆ ಡಿಮಾಂಡ್ ಮಾಡಿ ಹನಿಟ್ರ್ಯಾಪ್ ಅಡ್ಡಕ್ಕೆ ತಳ್ಳುತ್ತಿದ್ದ ಶಾಲಾ ಶಿಕ್ಷಕಿ ಕೊನೆಗೂ ಅರೆಸ್ಟ್ ಆಗಿದ್ದಾಳೆ.

ಹೌದು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆ ಉದ್ಯಮಿಯನ್ನು ಹನಿಟ್ರ್ಯಾಪ್ ವಂಚನೆಗೆ ಒಳಗಾಗಿಸಿ ಲಕ್ಷ ಲಕ್ಷ ವಂಚಿಸಿದ್ದಳು. ಟೀಚರ್‌ ಈಗ ಉದ್ಯಮಿಯನ್ನು ಬ್ಲಾಕ್ಮೇಲ್ ಮಾಡಲು ಹೋಗಿ ತನ್ನಿಬ್ಬರು ಸಹಚರರೊಂದಿಗೆ ಕಂಬಿ ಎಣಿಸುತ್ತಿದ್ದಾಳೆ.

ಒಂದಿಲ್ಲೊಂದು ಕಾರಣವನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಈ ಟೀಚರ್, ಮತ್ತೆ ಮಾರ್ಚ್ 17ರಂದು ಮತ್ತೆ ಉದ್ಯಮಿಗೆ ಕರೆ ಮಾಡಿದ್ದು, 15 ಲಕ್ಷ ಕೊಡುವಂತೆ ಪೀಡಿಸಿದ್ದಾಳೆ. ಹಣ ಕೊಟ್ಟರೆ ನಿನ್ನ ಅಶ್ಲೀಲ ವಿಡಿಯೋ, ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದ್ರೆ ನಿನ್ನ ಪತ್ನಿಗೆ ತೋರಿಸಿ ಸಂಸಾರ ಹಾಳು ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾಳೆ. ನಿರಂತರ ಬ್ಲಾಕ್ ಮೇಲ್ ಹಾಗೂ ಸುಲಿಗೆಯಿಂದ ಬೇಸತ್ತ ಉದ್ಯಮಿ ಕೊನೆಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಟೀಚರ್ ಶ್ರೀದೇವಿ ಕಳ್ಳಾಟ ಬೆಳಕಿಗೆ ಬಂದಿದ್ದು ಶ್ರೀದೇವಿ, ಗಣೇಶ್ ಮತ್ತು ಸಾಗರ್‌ನನ್ನು ಬಂಧಿಸಿದ್ದಾರೆ.

Comments are closed.