Mangaluru: ಮಂಗಳೂರು: ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯಿಂದ ಚಿತ್ರಕಲಾ ಸ್ಪರ್ಧೆ!

Mangaluru: ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ(ರಿ.) ಮಂಗಳೂರು (Mangaluru) ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಸಹಭಾಗಿತ್ವದಲ್ಲಿ ಮತ್ತು ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ ತುಳುನಾಡ ಅಮರ ಸುಳ್ಯ ಸಮರ-1837 ಸಂಸ್ಮರಣಾ ಮತ್ತು ವಿಜಯ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ವಿಷಯ:
1ರಿಂದ 4ನೇ ತರಗತಿ :-
ಸ್ವಾತಂತ್ರ್ಯ ಹೋರಾಟಗಾರ ಕದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಬಳಿ ರಾಷ್ಟ್ರ ಧ್ವಜಸ್ತಂಭ ಹೀಗಿದ್ದರೆ ಚಂದ
5ರಿಂದ 7ನೇ ತರಗತಿ :-
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಉದ್ಯಾನವನ ಹೀಗಿದ್ದರೆ ಚಂದ
8ರಿಂದ 10ನೇ ತರಗತಿ :-
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ರಸ್ತೆ ಹೀಗಿದ್ದರೆ ಚಂದ
ಸಾರ್ವಜನಿಕರಿಗೆ :-
ಶ್ರೀ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಯುದ್ಧ ಸ್ಮಾರಕ – ಹೀಗಿದ್ದರೆ ಚಂದ
ಏಪ್ರಿಲ್ 5 2025 ರಂದು ಬಾವುಟಗುಡ್ಡ ಮಂಗಳೂರು, ಸಮಯ: ಬೆಳಗ್ಗೆ 9.00 ರಿಂದ ಆರಂಭ.
ಬಹುಮಾನಗಳು:
ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಮತ್ತು ವಿಜೇತರಿಗೆ ನಗದು ಬಹುಮಾನ.
Comments are closed.