Belthangady : ಪದ್ಮುಂಜ ಸರಕಾರಿ ಶಾಲೆ- ವಂಚಿತ ಇಬ್ಬರು ವಿದ್ಯಾರ್ಥಿನಿಯರು SSLC ಪರೀಕ್ಷೆಗೆ ಹಾಜರು

Belthangady : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯೊಂದು, ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿತ್ತು. ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣ ನೀಡಿ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಇದು ಕರಾವಳಿ ಭಾಗದಲ್ಲಿ ಬಾರಿ ಚರ್ಚೆಯನ್ನು ಹುಟ್ಟು ಹಾಕಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೀಗ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದ್ದ ಪ್ರಸಂಗ ಬಗೆಹರಿದಿದ್ದು, ಇಬ್ಬರೂ ಬುಧವಾರದಂದು ಪರೀಕ್ಷೆ ಬರೆದಿದ್ದಾರೆ.
ಮುಖ್ಯ ಶಿಕ್ಷಕರು 100 ಪರ್ಸೆಂಟ್ ಫಲಿತಾಂಶ ದಾಖಲಿಸಬೇಕೆಂಬ ದುರುದ್ದೇಶದಿಂದಲೇ ಓದೋದರಲ್ಲಿ ಹಿಂದುಳಿದ ಇಬ್ಬರು ವಿದ್ಯಾರ್ಥಿನಿಯರಿಗೆ ಹಾಲ್ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ನಮ್ಮ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಹೀಗಾಗಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಇಬ್ಬರಿಗೂ ಪ್ರವೇಶ ಪತ್ರ ನೀಡಿದ್ದರು. ಆ ಬಳಿಕವೂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಅವರ ಮನವೊಲಿಸಿದ ಪರಿಣಾಮ ಕರಾಯ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿಜ್ಞಾನ ಪರೀಕ್ಷೆಯನ್ನು ಬರೆದರು. ಉಳಿದ ಒಂದು ಪರೀಕ್ಷೆಯನ್ನು ಬರೆದರೆ, ಉಳಿದ ನಾಲ್ಕು ಪರೀಕ್ಷೆಗಳನ್ನು ಮುಂದಿನ 2 ಹಂತಗಳಲ್ಲಿ ಬರೆಯಬಹುದಾಗಿದೆ.
Comments are closed.