Waqf bill: ವಕ್ಫ್ ಮಂಡಳಿಯಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ – ಅಮಿತ್ ಶಾ ಘೋಷಣೆ

Waqf bill: ಭಾರಿ ವಿರೋಧದ ನಡುವೆಯೂ ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯೋ ಮಂಡನೆಯಾಗಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಮಸೂದೆ ಮಂಡನೆ ಮಾಡಿದ್ದಾರೆ. ಈ ಬೆನ್ನಲ್ಲೇ ಯಾವುದೇ ಇಸ್ಲಾಮೇತರ ಸದಸ್ಯರು ವಕ್ಫ್‌ನ ಭಾಗವಾಗುವುದಿಲ್ಲ, ಇಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂದು ಅಮಿತ್ ಶಾ ಘೋಷಣೆ ಮಾಡಿದ್ದಾರೆ.
ಹೌದು, ಮಸೂದೆ ಮಂಡನೆ ಬಳಿಕ ಲೋಕಸಭೆಯಲ್ಲಿ ಮಾತನಾಡಿದವರು ಧಾರ್ಮಿಕ ಸಂಸ್ಥೆಯನ್ನು ನಿರ್ವಹಿಸಲು ಮುಸ್ಲಿಮೇತರರನ್ನು ನೇಮಿಸಲು ಯಾವುದೇ ನಿಬಂಧನೆ ಇಲ್ಲ ಅಥವಾ ಅಂತಹ ಯಾವುದೇ ವಿಚಾರವನ್ನು ಪರಿಚಯಿಸುವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಈ ಕಾಯ್ದೆಯು ನಮ್ಮ ಮುಸ್ಲಿಂ ಸಹೋದರರ ಧಾರ್ಮಿಕ ಆಚರಣೆಗಳು ಮತ್ತು ಅವರು ದಾನ ಮಾಡಿದ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವ ಗುರಿಯನ್ನು ಹೊಂದಿದೆ ಎಂಬ ವದಂತಿಯನ್ನು ವಿಪಕ್ಷಗಳಿಂದ ಹರಡಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಬೆದರಿಸಲು ಹೀಗೆ ಮಾಡಲಾಗುತ್ತಿದೆ. ವಿಪಕ್ಷಗಳು ಈ ಮಸೂದೆ ಬಗ್ಗೆ ತಪ್ಪು ವದಂತಿ ಹರಡಿಸುಸುತ್ತಿವೆ ಎಂದು ವಿಪಕ್ಷಗಳ ವಿರುದ್ಧ ಶಾ ಗುಡುಗಿದರು.
Comments are closed.