ಕೊಲ್ಪಾಡಿ ಅರ್ಚಕ ಕೆ. ಸುಬ್ರಾಯ ನೂರಿತ್ತಾಯ ವಿಧಿ ವಶ

Belalu: ಗ್ರಾಮದ ಕೊಡಂಗೆ ಮಜಲು ನಿವಾಸಿ ಕೆ. ಸುಬ್ರಾಯ ನೂರಿತ್ತಾಯರು ಎ. 3ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಅವರು ಕೊಲ್ಪಾಡಿ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಅರ್ಚಕರಾಗಿದ್ದರು. ಒಳ್ಳೆಯ ಪಾಕಶಾಸ್ತ್ರ ಪ್ರವೀಣರಾಗಿದ್ದ ಅವರು ಈ ಹಿಂದೆ ಅವರು ಬೆಳಾಲು ಮತ್ತಿತರ ಕಡೆ ಹೋಟೆಲ್ ನಡೆಸುತ್ತಿದ್ದರು.
ಅವರು ತಮ್ಮ ತಾಯಿ ಶತಾಯುಷಿ ಆಸುಪಾಸಿನಲ್ಲಿರುವ ತಾಯಿ ಪತ್ನಿ ಸುಮತಿ, ಮಕ್ಕಳಾದ ರಾಜಗೋಪಾಲ ಕೆ. ಎನ್., ಕಿರಣ್ ಕೆ. ಮತ್ತು ಸೋದರ ಸೋದರಿಯರು ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
Comments are closed.