of your HTML document.

Nadoja: ಹಂಪಿ ಕನ್ನಡ ವಿವಿ ಯಿಂದ ಕುಂ ವೀರಭದ್ರಪ್ಪ ಸೇರಿ ಮೂವರಿಗೆ ‘ನಾಡೋಜ’ ಪ್ರಶಸ್ತಿ ಘೋಷಣೆ !!

Nadoja: ರಾಜ್ಯದ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿ ಹಬ್ಬವು ಇದೆ ಏಪ್ರಿಲ್ ನಾಲ್ಕರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಮೂವರು ಸಾಧಕರಿಗೆ ನಾಡೋಜ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ಹೌದು, ನಾಡಿನ ಏಕೈಕ ಸಂಶೋಧನಾ ವಿಶ್ವವಿದ್ಯಾಲಯ ಎನಿಸಿರುವ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತರಾದ ನ್ಯಾ‌. ಶಿವರಾಜ್ ವಿ. ಪಾಟೀಲ್, ಬರಹಗಾರ ಮತ್ತು ಚಿಂತಕರಾದ ಕುಂ. ವೀರಭದ್ರಪ್ಪ, ಧಾರವಾಡದ ಹಿಂದೂಸ್ತಾನಿ ಗಾಯಕ ಪದ್ಮಶ್ರಿ ಎಂ. ವೆಂಕಟೇಶ್ ಕುಮಾರ್‌ ಅವರಿಗೆ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯಾದ ‘ನಾಡೋಜ’ ವನ್ನು ಘೋಷಿಸಲಾಗಿದೆ.

ಅಂದಹಾಗೆ ಘಟ್ಟಿಕೋತ್ಸವ- 33ನೇ ನುಡಿ ಹಬ್ಬ ಇದೇ ಏಪ್ರಿಲ್ 4 ರಂದು ನವರಂಗ ವೇದಿಕೆಯಲ್ಲಿ ನಡೆಯಲಿದೆ. ಇದೇ ವೇಳೆ ನಾಡೋಜ ಪ್ರಶಸ್ತಿಯನ್ನು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಧಾನ ಮಾಡುತ್ತಾರೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ ವಿ ಪರಮಶಿವಮೂರ್ತಿ ಅವರು ತಿಳಿಸಿದ್ದಾರೆ.

Comments are closed.