Udupi: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಕರಿಮಣಿ ಸರಕ್ಕೆ ಕನ್ನ: ಆರೋಪಿ ಅರೆಸ್ಟ್

Udupi: ಬೆಳುವಾಯಿ ಕರಿಯನಂಗಡಿ ಬಳಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ “ಬೆಳುವಾಯಿಗೆ ದಾರಿ ಯಾವುದು” ಎಂದು ಕೇಳಿ ಆಕೆಯ ಕರಿಮಣಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳುವಾಯಿ ಕಾಯಿದೆಮನೆ ಇಂದಿರಾ ಅವರು ತಮ್ಮ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಕರಿಮಣಿ ಸರಕ್ಕೆ ಕೈ ಹಾಕುವಾಗ ಎಳೆದಾಡಿದ ಆಕೆಯನ್ನು ಆತ ದೂಡಿ ಹಾಕಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.