of your HTML document.

Parliament: ಕರ್ನಾಟಕದ 30 ಸಾವಿರ ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ !!

Parliament : ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಬಹುಮತಗಳಿಂದ ಅಂಗೀಕಾರ ಗೊಂಡಿದೆ. ಮಸೂದೆ ಮಂಡನೆಯಾದ ಬಳಿಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕ ವಕ್ಫ್ ಕುರಿತು ಅಮಿತ್ ಶಾ ಅವರು ಪ್ರಸ್ತಾಪ ಮಾಡಿದ್ದಾರೆ.

ಹೌದು, ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮೇಲಿನ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದಲ್ಲಿ ವಕ್ಫ್ ಭೂಕಬಳಿಕೆಯ ಬಗ್ಗೆಯೂ ಪ್ರಸ್ತಾಪಿಸಿದ್ದು ‘ಮಾಣಿಪ್ಪಾಡಿ ವರದಿಯ ಪ್ರಕಾರ ಕರ್ನಾಟಕದ 30,000 ಎಕರೆ ವಕ್ಫ್ ಆಸ್ತಿಯನ್ನು ವಿದೇಶದ ಸಂಸ್ಥೆಗಳಿಗೆ ಬಾಡಿಗೆ ನೀಡಲಾಗಿದೆ ಎಂದು ಹೇಳಿದೆ. ಇದರಿಂದ ಭಾರೀ ಆದಾಯ ನಷ್ಟವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು

ಅಲ್ಲದೆ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ 1500 ಎಕರೆಯನ್ನ ವಕ್ಫ್ ಆಸ್ತಿ ಎಂದು ಘೋಷಿಸಿ ವಿವಾದ ಮಾಡಲಾಯ್ತು. ಕರ್ನಾಟಕದ ವಿಜಯಪುರದ ಹೊನ್ವಾಡ್ ಗ್ರಾಮದಲ್ಲಿ, ವಕ್ಫ್ ಮಂಡಳಿಯು ಹಕ್ಕು ಮಂಡಿಸಿದ ನಂತರ 1,500 ಎಕರೆ ಭೂಮಿ ವಿವಾದಕ್ಕೆ ಒಳಗಾಯಿತು.ಇದು ಕಾನೂನು ಮತ್ತು ಆಡಳಿತಾತ್ಮಕ ಸಂಘರ್ಷಗಳಿಗೆ ಕಾರಣವಾಯಿತು. ಈ ವಿವಾದಿತ ಭೂಮಿ 5000 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ, ಎಕರೆಗೆ 12,000 ರೂಪಾಯಿಯಂತೆ ಗುತ್ತಿಗೆಗೆ ನೀಡಲಾಗಿದೆ ಎಂದು ಹೇಳಿದರು.

Comments are closed.