Cheating Case: ಇದಕ್ಕೆ ಹೇಳೋದು ಗಂಡನ ಮೊಬೈಲನ್ನು ಹೆಂಡತಿ ಚೆಕ್ ಮಾಡಬೇಕು ಅಂತ: ತಪ್ಪಿದ ದೊಡ್ಡ ಅನಾಹುತ

Cheating Case: ನಾಗಪುರದ(Nagapura) 24 ವರ್ಷದ ಮಹಿಳೆಯೊಬ್ಬರು ತನ್ನ ಪತಿಯ ಕರಾಳ ರಹಸ್ಯಗಳನ್ನು ಬಯಲು ಮಾಡಿ, ಅವನು ಹಲವಾರು ಮಹಿಳೆಯರ(Woman) ಮೇಲೆ ಲೈಂಗಿಕದೌರ್ಜನ್ಯ(Rape)ಮತ್ತುಬ್ಲ್ಯಾಕ್‌ಮೇಲ್(Blackmail) ಮಾಡುತ್ತಿರುವುದನ್ನು ತಪ್ಪಿಸಿದ್ದಾಳೆ. ಆಕೆ ತನ್ನ ಗಂಡನ ದುಷ್ಕೃತ್ಯ ನೋಡಿ ಸುಮ್ಮಲಾಗಲಿಲ್ಲ. ಮೊದಲಿಗೆ ಆಕೆಗೆ ತನ್ನ ಗಂಡನ ಬುದ್ದಿ ತಿಳಿದು ಪ್ರಪಂಚವೇ ಛಿದ್ರಗೊಂಡ ಅನುಭವವಾದರೂ, ನಂತರ ಸುಧಾರಿಸಿಕೊಂಡು ಪೊಲೀಸ್(Police) ದೂರು ನೀಡಿದ್ದಾಳೆ. ಈಗ ಅವಳ ಪತಿ ಪೊಲೀಸ್ ಅತಿಥಿಯಾಗಿದ್ದಾನೆ.
ಸುಮಾರು ವರ್ಷಗಳ ಕಾಲ, ಅವಳು ಅವನ ಕ್ರೌರ್ಯವನ್ನು ಸಹಿಸಿಕೊಂಡಿದ್ದಳು. ಅವನು ಅವಳನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳಿಗೆ ಒತ್ತಾಯಿಸುತ್ತಿದ್ದ. ಅವಳನ್ನು ಸಂಗಾತಿಗಿಂತ ಹೆಚ್ಚಾಗಿ ವಸ್ತುವಿನಂತೆ ನಡೆಸಿಕೊಂಡಿದ್ದ. ಅವನು ಮೋಸ ಮಾಡುತ್ತಿದ್ದಾನೆಂದು ಎಂದು ಅನುಮಾನಗೊಂಡಾಗ, ಆತನ ಅಸಲಿ ಮುಖವನ್ನು ಬಯಲಿಗೆಳೆಯಲು ನಿರ್ಧರಿಸಿದ್ದಳು. ಅವಳು ಅವನ ಫೋನ್ ಅನ್ನು ಕ್ಲೋನ್ ಮಾಡಿ ಅವನ ವಾಟ್ಸಾಪ್ ಹ್ಯಾಕ್ ಮಾಡಿದಳು. ಆತನ ಫೋನ್ ನೋಡೊ ಆಕೆ ದಿಗ್ಭ್ರಮೆಗೊಂಡಳು.
ಅವನ ಸುಳ್ಳಿನ ಜಾಲದಲ್ಲಿ ಸಿಲುಕಿರುವ ಲೆಕ್ಕವಿಲ್ಲದಷ್ಟು ಮಹಿಳೆಯರ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ಇದ್ದವು. ಅವನು ನಕಲಿ ಗುರುತುಗಳನ್ನು ಬಳಸಿದ್ದನು, ತನ್ನ ಮದುವೆಯನ್ನು ಮರೆಮಾಚಿ, ಅನೇಕ ಹೆಣ್ಣು ಮಕ್ಕಳಿಗೆ ಪ್ರೀತಿಯ ಭರವಸೆ ನೀಡಿದ್ದನು. ಹಾಗೂ ಬಹಳ ನಾಜಕೂಕಿನಿಂದ ಅನೇಕ ಮಹಿಳೆಯರೊಂದಿಗಿನ ಸಂಬಂಧವನ್ನು ನಿಭಯಿಸಿದ್ದನು. ಅವರೊಂದಿಗೆ ಮಾತನಾಡಿದ ಹಾಗೂ ಕಳೆದ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡು ಅವರಿಗೆ ಬ್ಲಾಕ್‌ಮೈಲ್ ಮಾಡಿ ಭಯ ಹುಟ್ಟಿಸಿ ತನ್ನ ಕೆಲಸವನ್ನು ಸಾಧೀಸಿಕೊಳ್ಳೂತ್ತಿದ್ದನು.
ಆತನ ಮೋಸದ ಜಾಲಕ್ಕೆ ಬಿದ್ದವರಲ್ಲಿ ಒಬ್ಬಳು 19 ವರ್ಷದ ವಿದ್ಯಾರ್ಥಿನಿ, ತನ್ನ ಅಧ್ಯಯನಕ್ಕಾಗಿ ನಾಗ್ಪುರಕ್ಕೆ ಬಂದಿದ್ದಳು. ಅವನು ಬೇರೆ ವ್ಯಕ್ತಿಯಂತೆ ನಟಿಸಿದನು, ತನ್ನ ವೈವಾಹಿಕ ಸ್ಥಿತಿಯ ಬಗ್ಗೆ ಸುಳ್ಳು ಹೇಳಿ ಆಕೆ ಮನಸ್ಸು ಕದ್ದಿದ್ದನ್ನು. ಆದರೆ ಪತ್ನಿ ಆಕೆಯನ್ನು ಹುಡುಕಿ ಆಕೆಗೆ ಧೈರ್ಯ ಹೇಳಿ ಅವಳಿಂದ ಪೊಲಿಸ್ ದೂರು ಕೊಡಿಸಿದ್ದಳು. ಪತ್ನಿಯ ಬೆಂಬಲದೊಂದಿಗೆ, ಯುವತಿ ದೂರು ದಾಖಲಿಸಿ, ತನಗಾದ ಅನ್ಯಾಯವನ್ನು ಹೊರಗೆ ತರುವಲ್ಲಿ ಯಶಸ್ವಿಯಾದಳು.
ಆರೋಪಿಯು ಹಲವಾರು ಮಹಿಳೆಯರನ್ನು ವಂಚಿಸುತ್ತಿದ್ದ, ಹಾಗೂ ಅವರನ್ನೆಲ್ಲಾ ಲೈಂಗಿಕ ಸಂಬಂಧಕ್ಕೆ ಒತ್ತಾಯಮಾಡಿ, ನಂತರ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂದು ಪೊಲೀಸರು ದೃಢಪಡಿಸಿದರು. ಪ್ಯಾನ್ ಶಾಪ್ ಮಾಲೀಕನಾಗಿ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರೂ, ಅವನು ಇಂಥ ಹೇಸಿಗೆ ಜೀವನವನ್ನು ನಡೆಸುತ್ತಿದ್ದನು. ಈಗ ಅವನು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಅತ್ಯಾಚಾರ, ವಂಚನೆ, ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆಗಾಗಿ ಆರೋಪಗಳನ್ನು ಎದುರಿಸುತ್ತಿದ್ದಾನೆ. ಒಂದು ಕಾಲದಲ್ಲಿ ಮೌನವಾಗಿ ಬಳಲುತ್ತಿದ್ದ ಅವನ ಹೆಂಡತಿ ಈಗ ಅವನ ಪ್ರಬಲ ಎದುರಾಳಿಯಾಗಿದ್ದಾಳೆ, ದ್ರೋಹದ ನಡುವೆಯೂ ಧೈರ್ಯವು ನ್ಯಾಯವನ್ನು ತರಬಲ್ಲದು ಎಂದು ಸಾಬೀತುಪಡಿಸುತ್ತಾಳೆ.
Comments are closed.