Nityananda: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸಾವು? ಅಷ್ಟಕ್ಕೂ ಆಗಿದ್ದೇನು

Nintyananda: ಭಾರತದಲ್ಲಿ ಸಾಕಷ್ಟು ವಿವಾದಗಳ ಸುಳಿಯಲ್ಲಿ ಸಿಲುಕಿ, ವಿದೇಶಕ್ಕೆ ಕಾಲ್ ಕೆತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುತ್ತಿದೆ. ಹಾಗಿದ್ದರೆ ನಿತ್ಯಾನಂದನಿಗೆ ಆಗಿದ್ದೇನು? ಈ ಸುದ್ದಿ ನಿಜವೇ? ಎಂಬ ಪ್ರಶ್ನೆ ಕಾಡುತ್ತಿದೆ
ಅಂದಹಾಗೆ ನಿತ್ಯಾನಂದನ ಸಹೋದರಿಯ ಮಗ ಸುಂದರೇಶ್ವರನ್ ಈ ಮಾಹಿತಿಯನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದರು. ವಿಡಿಯೋ ದಲ್ಲಿ ಅವರು ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮಕ್ಕಾಗಿ ಶ್ರಮಿಸಿದರು ಎಂದು ಸ್ಮರಿಸಿದರು. ನಿತ್ಯಾನಂದರು ತಮ್ಮ ಆಧ್ಯಾತ್ಮಿಕ ಸಂದೇಶಗಳಿಂದ ಅನೇಕ ಭಕ್ತರ ಮೆಚ್ಚುಗೆಯನ್ನು ಗಳಿಸಿದರು, ಇಂದು ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದ್ದರು.
ಅಷ್ಟೇ ಅಲ್ಲದೆ ನಿತ್ಯಾನಂದ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕೋಮಾದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಅವರು ಈ ವದಂತಿಗಳಿಗೆ ಅಂತ್ಯ ಹಾಡಲು ವೀಡಿಯೊ ಮೂಲಕ ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದರು. ಆದರೆ, ಈಗ ಅವರು ಮತ್ತೆ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಆದರೆ ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬಿದ್ದಿಲ್ಲ ಎನ್ನಲಾಗಿದ್ದು ಇದನ್ನು ನಿತ್ಯಾನಂದನ ಆಪ್ತ ಮೂಲಗಳು ಅಲ್ಲಗಳೆದಿವೆ. ಅವರ ಆಶ್ರಮದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ನಿತ್ಯಾನಂದ ಹೇಗೆ ಮೃತಪಟ್ಟರು? ಅವರು ಮೃತಪಟ್ಟಿದ್ದಾರೆಯೇ? ಹೀಗೆ ಹಲವು ಪ್ರಶ್ನೆಗಳಿಗೆ ಇನ್ನೂ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ.
ಜೊತೆಗೆ ಏಪ್ರಿಲ್ 1 ತಾರೀಕು ಆಗಿರುವುದರಿಂದ ಉದ್ದೇಶಪೂರ್ವಕವಾಗಿ ಸಾವಿನ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಆತನ ಟ್ರಸ್ಟ್‌ಗೆ ಸೇರಿದ ₹4000 ಕೋಟಿ ಮೌಲ್ಯದ ಆಸ್ತಿಗಳನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ದೊಡ್ಡ ಪ್ರಶ್ನೆ ಕೂಡಾ ಉದ್ಭವಿಸಿದೆ. ಹೀಗೆ ನಿತ್ಯಾನಂದ ಸ್ವಾಮಿಯ ಸಾವಿನ ವದಂತಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಈ ವದಂತಿಯ ಸತ್ಯಾಸತ್ಯತೆ ತಿಳಿಯಲು ಜನ ಕಾತರದಿಂದ ಕಾಯುತ್ತಿದ್ದಾರೆ.
Comments are closed.