Nityananda : ನಿತ್ಯಾನಂದ ಸಾವು ವಿಚಾರ – ‘ಕೈಲಾಸ’ದಿಂದ ಬಂತು ಸ್ಪಷ್ಟನೆ

Nityananda: ಭಾರತದಲ್ಲಿ ಸಾಕಷ್ಟು ವಿವಾದಗಳ ಸುಳಿಯಲ್ಲಿ ಸಿಲುಕಿ, ವಿದೇಶಕ್ಕೆ ಕಾಲ್ ಕೆತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುತ್ತಿದೆ. ಇದುವರೆಗೂ ಈ ಕುರಿತಾಗಿ ಯಾವುದೇ ಸ್ಪಷ್ಟೀಕರಣ ಬಂದಿರಲಿಲ್ಲ. ಆದರೆ ಈಗ ಕೊನೆಗೂ ನಿತ್ಯಾನಂದನ ದೇಶವಾದ ಕೈಲಾಸದಿಂದ ಈ ಕುರಿತಾಗಿ ಸ್ಪಷ್ಟನೆ ಬಂದಿದೆ.
ಹೌದು, ಎರಡು ದಿನಗಳ ಹಿಂದೆ ನಿಧನರಾದರು ಎಂಬ ವರದಿಗಳು ಹೊರಬಿದ್ದವು. ಕಳೆದ ಭಾನುವಾರ, ಅವರ ಸೋದರಳಿಯ ಸುಂದರೇಶ್ವರನ್ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದರು, ಅದರಲ್ಲಿ ಸ್ವಾಮಿ ನಿತ್ಯಾನಂದ ಹಿಂದೂ ಧರ್ಮವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಕೈಲಾಸದ ಜನರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿತ್ಯಾನಂದ ಸಾವನ್ನಪ್ಪಿಲ್ಲ ಎಂದಿದ್ದಾರೆ.
ನಿತ್ಯಾನಂದನ ವಿರುದ್ಧ ಅತ್ಯಾಚಾರ, ಅಪಹರಣ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿವೆ. 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದ. ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಲ್ಲಿದೆ. ವಂಚನೆಗೆ ಸಂಬಂಧಿಸಿದ ಆರೋಪಗಳ ಮೇಲೆ ಫ್ರಾನ್ಸ್‌ನಲ್ಲಿಯೂ ಸಹ ಆತನಿಗಾಗಿ ಬೇಕಾಗಿದ್ದಾನೆ. 2020 ರಲ್ಲಿ ಹಿಂದೂ ಸಾರ್ವಭೌಮ ರಾಷ್ಟ್ರ ‘ಕೈಲಾಸ’ ಸ್ಥಾಪನೆ ಮಾಡಿರುವುದಾಗಿ ಘೋಷಿಸಿದ್ದ. ಕೊನೆಗೂ ವಿವಿಧ ಆರೋಪಗಳನ್ನು ಹೊತ್ತಿದ್ದ ನಿತ್ಯಾನಂದ ದೇಶದಿಂದ ಪರಾರಿಯಾಗಿ ತನ್ನದೇ ಆದ ಕೈಲಾಸ ಎನ್ನುವ ದೇಶ ಕಟ್ಟಿಕೊಂಡು ಬದುಕುತ್ತಿದ್ದಾನೆ.
Comments are closed.