Kerala: ನನ್ನ ಗಂಡನಿಗೆ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲ-ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ!

Kerala: ತನ್ನ ಗಂಡನಿಗೆ ದೈಹಿಕ ಸಂಪರ್ಕದಲ್ಲಿ ಆಸಕ್ತಿಯೇ ಇಲ್ಲ ಎಂದು ಆರೋಪಿಸಿ ಕೇರಳ ಮೂಲದ ಮಹಿಳೆಯೊಬ್ಬರು ಕೇಸು ದಾಖಲು ಮಾಡಿದ್ದಾರೆ. ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೋ ಎಂದು ನನಗೆ ಒತ್ತಾಯ ಮಾಡುತ್ತಾನೆ ಎಂದು ಗಂಡ ವಿರುದ್ಧ ಆರೋಪ ಮಾಡಿದ್ದಾರೆ. ಇದೀಗ ಕೇರಳದ ಹೈ ಕೋರ್ಟ್ ವಿಚ್ಛೇದನ ಮಂಜೂರು ಮಾಡಿ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಪನ್ನು ನೀಡಿದೆ.
2016 ರಲ್ಲಿ ಮದುವೆಯಾದ ಈ ಜೋಡಿ ನಡುವೆ ಕೆಲ ಸಮಯದ ಬಳಿಕ ಮನಸ್ತಾಪಗಳು ಉಂಟಾಗಿದೆ. ಗಂಡನ ಅತಿಯಾದ ಆಚರಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಪತಿಗೆ ಲೈಂಗಿಕ ಕ್ರಿಯೆ ಅಥವಾ ಮಕ್ಕಳನ್ನು ಹೊಂದುವಲ್ಲಿ ಯಾವುದೇ ಆಸಕ್ತಿ ಇಲ್ಲ. ಕಚೇರಿಯಿಂದ ಬಂದ ನಂತರ ಆತ ಕೇವಲ ದೇವಸ್ಥಾನ, ಮಂದಿರಗಳಿಗೆ ಭೇಟಿ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾಳೆ.
Comments are closed.