Waqf bill: ವಕ್ಫ್ ತಿದ್ದುಪಡಿ ಬಿಲ್ ಮಂಡನೆಯಾಗುತ್ತಿದ್ದಂತೇ ಪಟಾಕಿ ಹೊಡೆದು ಸಂಭ್ರಮಿಸಿದ ಮುಸ್ಲಿಂ ಮಹಿಳೆಯರು!!

Waqf bill: ಭಾರಿ ವಿರೋಧದ ನಡುವೆಯೂ ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯೋ ಮಂಡನೆಯಾಗಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಮಸೂದೆ ಮಂಡನೆ ಮಾಡಿದ್ದಾರೆ. ಇದಕ್ಕೆ ದೇಶಾದ್ಯಂತ ಮುಸ್ಲಿಂ ಮೌಲ್ವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅಚ್ಚರಿಯೇನೆಂದರೆ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಬಿಲ್ ಮಂಡನೆಯಾಗುತ್ತಿದ್ದಂತೇ ಕೆಲವು ಮುಸ್ಲಿಂ ಮಹಿಳೆಯರ ಗುಂಪು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಲ್ಲದೇ ಥ್ಯಾಂಕ್ಯೂ ಮೋದಿಜಿ ಎಂದಿದ್ದಾರೆ. ಈ ವಿಡಿಯೋಗಳು ಈಗ ವೈರಲ್ ಆಗಿದೆ.

ಹೌದು, ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು, ವಕ್ಫ್ ಗೆ ತಿದ್ದುಪಡಿ ಮಾಡಿರುವುದನ್ನು ಸ್ವಾಗತಿಸಿದ್ದಾರೆ. ಇದಲ್ಲದೆ ಇನ್ನೂ ಕೆಲವೆಡೆ ಮುಸ್ಲಿಮರೇ ಬಿಲ್ ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

Comments are closed.