Gold Price : ಚಿನ್ನದ ದರದಲ್ಲಿ ಭಾರಿ ಏರಿಕೆ – 10 ಗ್ರಾಂ ಚಿನ್ನಕ್ಕೆ 95,000 ರೂ!!

Gold Price: ಚಿನ್ನದ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಕೆಲವು ದಿನಗಳ ಹಿಂದೆ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಆದರೆ ಈಗ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. ಆಶ್ಚರ್ಯ ಏನಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇದೀಗ 2000 ದಿಡೀರ್ ಏರಿಕೆ ಕಂಡಿದ್ದು, ಈ ಮೂಲಕ 10 ಗ್ರಾಂ ಚಿನ್ನಕ್ಕೆ ಒಟ್ಟು 95,000 ಆದಂತಾಗಿದೆ.
ಮಂಗಳವಾರ ಒಂದೇ ದಿನ 10 ಗ್ರಾಂ ಚಿನ್ನದ ಎರಡು ಸಾವಿರ ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 94,000 ರೂ., ಬೆಂಗಳೂರಿನಲ್ಲಿ 95,000 ರೂ.ಗೆ ತಲುಪಿ ಹೊಸ ದಾಖಲೆ ಬರೆದಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಪರಿಶುದ್ಧ ಚಿನ್ನದ ಗಟ್ಟಿಯ ದರ 95,890 ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 94,150 ರೂಪಾಯಿಗೆ ತಲುಪಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ದರದಲ್ಲಿ ಶೇಕಡ 35ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ಸಮಯದಲ್ಲಿ 68,000 ರೂ.ಇದ್ದ ಚಿನ್ನದ ದರ ಈಗ 95,000 ರೂ.ಗೆ ತಲುಪಿದ್ದು, 27 ಸಾವಿರ ರೂಪಾಯಿ ಏರಿಕೆಯಾಗಿದೆ.
Comments are closed.