of your HTML document.

Gujarat: ಮಹಾತ್ಮಾಗಾಂಧಿ ಕುಟುಂಬದ ಮರಿಮೊಮ್ಮಗಳು ನಿಧನ!

Gujarat: ಮಹಾತ್ಮಾಗಾಂಧಿ ಕುಟುಂಬದ ಮರಿಮೊಮ್ಮಗಳು ನೀಲಮ್‌ ಬೇನ್‌ ಪಾರಿಖ್‌ (93) ಮಂಗಳವಾರ ರಾತ್ರಿ ಗುಜರಾತ್‌ನ ನವಸಾರಿಯಲ್ಲಿ ನಿಧನ ಹೊಂದಿದ್ದಾರೆ. ಮಹಿಳಾಭಿವೃದ್ಧಿ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ತಾವು ಇವರು ತೊಡಗಿಸಿಕೊಂಡಿದ್ದರು.

ಪುತ್ರ ಡಾ.ಸಮೀರ್‌ ಪಾರೀಖ್‌ ಅವರ ಜೊತೆ ಇವರು ವಾಸ ಮಾಡುತ್ತಿದ್ದರು.

ಹರಿದಾಸ್‌ ಗಾಂಧಿಯವರ ಮೊಮ್ಮಗಳಾಗಿದ್ದ ನೀಲಮ್‌ ಬೇನ್‌ ಪಾರಿಖ್‌ ಅವರ ಅಂತ್ಯಕ್ರಿಯೆ ಇಂದು ಹುಟ್ಟೂರಿನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Comments are closed.