of your HTML document.

Raichur: ಮೊಲಗಳನ್ನು ಬೇಟೆಯಾಡಿ ಸಂಭ್ರಮಿಸಿದ್ದ ಪ್ರಕರಣ – ಶಾಸಕನ ಪುತ್ರ, ಸಹೋದರನ ವಿರುದ್ಧ ಕೇಸ್ ದಾಖಲು!!

Raichur : ಮೊಲ ಬೇಟೆಯಾಡಿ ಮೆರವಣಿಗೆ ಮಾಡಿ ಸಂಭ್ರಮಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರ ಮಗ ಹಾಗೂ ಸಹೋದರನ ವಿರುದ್ಧ ಕೇಸ್ ದಾಖಲಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಶಾಸಕ ಬಸನಗೌಡ ವರ ಪುತ್ರ ಹಾಗೂ ಸಹೋದರ ಮೊಲಗಳನ್ನು ಬೇಟೆಯಾಡಿದ್ದು ಅಲ್ಲದೆ ಅವುಗಳನ್ನು ಕಟ್ಟಿಗೆಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಶಾಸಕರ ಪುತ್ರ ಮತ್ತು ಸಹೋದರ ಮೇಲೆ ಬಂದಿತ್ತು. ಇದೀಗ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶಾಸಕ ತುರ್ವಿಹಾಳ ಪುತ್ರ ಸತೀಶ್ ಗೌಡ ಹಾಗೂ ಸಹೋದರ ಸಿದ್ದನಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

Comments are closed.