Highspeed Diesel : ರಾಜ್ಯದ ಜನತೆಗೆ ಬಿಗ್ ಶಾಕ್ – ರಾತ್ರೋರಾತ್ರಿ ಡೀಸೆಲ್ ದರದಲ್ಲಿ 3 ರೂ ಹೆಚ್ಚಿಸಿದ ಸರ್ಕಾರ !!

Highspeed Diesel :ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು ಹೈಸ್ಪೀಡ್ ಡೀಸೆಲ್ ದರದಲ್ಲಿ 3 ರೂಪಾಯಿ ಏರಿಕೆ ಮಾಡಿ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಆದೇಶ ನೀಡಿದೆ.
ಹೌದು, ಹೈಸ್ಪೀಡ್ ಡೀಸೆಲ್ ಮೇಲೆ 2.73% ರಷ್ಟು ತೆರಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸದ್ಯ ಬೆಂಗಳೂರಿನಲ್ಲಿ 88.99 ರೂ.ಗೆ ಹೈಸ್ಪೀಡ್ ಡೀಸೆಲ್ ಮಾರಾಟವಾಗುತ್ತಿದೆ. ಈ ಹಿಂದೆ 18.44% ಇದ್ದ ತೆರಿಗೆ ಸದ್ಯ 21.17% ಕ್ಕೆ ಏರಿಕೆ ಮಾಡಲಾಗಿದೆ.
ಹೈಸ್ಪೀಡ್ ಡೀಸೆಲ್ ದರವನ್ನು ಮಧ್ಯರಾತ್ರಿಯಿಂದಲೇ ಜಾರಿಗೆ ತರಲಾಗಿದೆ. ಹಲವು ವಸ್ತುಗಳ ಬೆಲೆ ಏರಿಕೆಗಳ ನಡುವೆಯೇ ಈ ಮೂಲಕ ರಾಜ್ಯದ ಜನತೆಗೆ ಸರ್ಕಾರವು ಮತ್ತೊಂದು ಶಾಕ್ ನೀಡಿದೆ.
ಸಕ್ಷಮ ಪ್ರಾಧಿಕಾರದ ಅನುಮೋದನೆಯ ನಂತರ ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ಕರ್ನಾಟಕ ಮಾರಾಟ ತೆರಿಗೆ ದರವನ್ನು ದಿನಾಂಕ: 01-04-2025 ರಿಂದ ಜಾರಿಗೆ ಬರುವಂತೆ ಶೇ 21.17ಕ್ಕೆ ಏರಿಸಲಾಗಿದೆ. ಇದರಿಂದಾಗಿ ಪ್ರತಿ ಲೀಟರಿಗೆ ರೂ 2ರಷ್ಟು ಏರಿಕೆಯಾಗಿ, ಮಾರಾಟ ದರವು ರೂ. 91.02 ಆಗುತ್ತದೆ.
Comments are closed.