of your HTML document.

Accident: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿಸಿದ 15 ವರ್ಷದ ಬಾಲಕ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Accident: ರಸ್ತೆಯಲ್ಲಿ(Road) ಆಟವಾಡುತ್ತಿದ್ದ 2 ವರ್ಷದ ಮಗುವಿನ ಮೇಲೆ ಕಾರು(Car) ಹರಿದ ಘಟನೆ ದೆಹಲಿಯ(Delhi) ಪಹರ್‌ಗಂಜ್‌ನಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ(CCTV) ದೃಶ್ಯ ಸೆರೆಯಾಗಿದೆ. 15 ವರ್ಷದ ಬಾಲಕ ಕಾರು ಚಲಾಯಿಸಿಕೊಂಡು ಬಂದು ಮಗುವಿನ ಮೇಲೆ ಮುಂಭಾಗದ ಟೈರ್ ಹತ್ತಿಸಿದ್ದಾನೆ. ತಕ್ಷಣ ಅಲ್ಲಿದ್ದವರು ಓಡಿ ಬಂದು ಚಕ್ರಕ್ಕೆ ಸಿಲುಕಿದ್ದ ಮಗುವನ್ನು ಹೊರತೆಗೆಯುವುದು ವಿಡಿಯೋದಲ್ಲಿ ಕಂಡುಬಂದಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

Comments are closed.