Yogi Adityanath: ಉತ್ತರ ಪ್ರದೇಶದಲ್ಲಿ ತಮಿಳು, ತೆಲುಗು ಭಾಷೆ ಕಲಿಸುತ್ತಿದ್ದೇವೆ: ಸಿಎಂ ಯೋಗಿ ಆದಿತ್ಯನಾಥ್

Yogi Adityanath: ತ್ರಿಭಾಷಾ ನೀತಿ ವಿವಾದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ(UP) ಸಿಎಂ ಯೋಗಿ ಆದಿತ್ಯನಾಥ್, ನಮ್ಮ ರಾಜ್ಯದಲ್ಲಿ ತಮಿಳು(Tamil), ತೆಲುಗು(Telugu), ಮಲಯಾಳಂ(Malayalam), ಕನ್ನಡ(Kannada), ಬಂಗಾಳಿ(Bangali) ಮತ್ತು ಮರಾಠಿ(Marati) ಭಾಷೆಗಳನ್ನು ಕಲಿಸಲಾಗುತ್ತಿದೆ ಎಂದರು. ಜನರು ತಮ್ಮ ಸಂಕುಚಿತ ರಾಜಕೀಯ ಹಿತಾಸಕ್ತಿಗಳಿಂದಾಗಿ ಈ ಭಾಷಾ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ನಿರಾಕರಿಸಿದ್ದರು.
Comments are closed.