of your HTML document.

Honey Trap: ಒಂದು ಕಿಸ್ಸಿನ ಕಥೆ; ಲಕ್ಷಾಂತರ ಸುಲಿಗೆ; ಹನಿಟ್ರ್ಯಾಪ್‌ ಗ್ಯಾಂಗ್‌ ಬಂಧನ!

Honey Trap: ಪ್ರಿ ಸ್ಕೂಲ್‌ಗೆ ಬರುತ್ತಿದ್ದ ಮಕ್ಕಳ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್‌ ಮಾಡಿ, 50ಸಾವಿರ ಸುಲಿಗೆ ಮಾಡಿರುವ ಟೀಚರ್‌ ಆಂಡ್‌ ಗ್ಯಾಂಗ್‌ ಇದೀಗ ಪೊಲೀಸ್‌ ಬಲೆಗೆ ಬಿದ್ದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಖಾಸಗಿ ಪ್ರೀಸ್ಕೂಲ್‌ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್‌ ಮಾಡಿದ ಶಿಕ್ಷಕಿ.

ಆರೋಪಿ ಶ್ರೀದೇವಿ ರುಡಿಗಿಗೆ 2023 ರಲ್ಲಿ ರಾಕೇಶ್‌ ಎಂಬ ಪೋಷಕನ ಪರಿಚಯವಾಗಿತ್ತು. ಆತನಿಂದ ಈಕೆ ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆ ಎಂದು ಹೇಳಿ ನಾಲ್ಕು ಲಕ್ಷ ಸಾಲ ಪಡೆದಿದ್ದರು. 2024 ರ ಮಾರ್ಚ್‌ನಲ್ಲಿ ವಾಪಸ್‌ ಕೊಡುವುದಾಗಿ ತಿಳಿಸಿದ್ದಳು. ಆದರೆ ಹಣ ವಾಪಾಸು ಕೊಟ್ಟಿರಲಿಲ್ಲ. ಈಗ ಕೊಡಲು ಆಗುವುದಿಲ್ಲ. ನೀವು ಪಾರ್ಟನ್‌ಶಿಪ್‌ ಆಗಿ ಎಂದು ಹೇಳಿದರು. ನಂತರ ಇವರಿಬ್ಬರ ಮಧ್ಯೆ ಸಲುಗೆ ಬೆಳೆದಿದೆ. ಶ್ರೀದೇವಿ ಜೊತೆ ಮಾತನಾಡಲೆಂದೇ ರಾಕೇಶ್‌ ಹೊಸ ಸಿಮ್‌ ಹಾಗೂ ಫೋನ್‌ ಖರೀದಿ ಮಾಡಿದ್ದರು. ನಂತರ ಮತ್ತೆ ಹಣದ ಕುರಿತು ರಾಕೇಶ್‌ ಕೇಳಿದಾಗ, ʼನಿನ್ನ ಜೊತೆ ರಿಲೇಶನ್‌ ಶಿಪ್‌ನಲ್ಲಿ ಇರುತ್ತೇನೆʼ ಎಂದು ಹೇಳಿ ಶ್ರೀದೇವಿ 15 ಲಕ್ಷ ರೂ. ಹಣ ಕೇಳಿದ್ದಳು. ಇದಕ್ಕೆ ರಾಕೇಶ್‌ ಒಪ್ಪಲಿಲ್ಲ.

ಅನಂತರ ಈಕೆ ರಾಕೇಶ್‌ ಮನೆಗೆ ತೆರಳಿ ಮುತ್ತು ನೀಡಿದ್ದಳು. ನಂತರ ಆತನನ್ನು ಬ್ಲ್ಯಾಕ್‌ಮೇಲ್‌ ಮಾಡಿ 50 ಸಾವಿರ ರೂ. ಪಡೆದಿದ್ದಳು ಎಂದು ಪೊಲೀಸ್‌ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ರಾಕೇಶ್‌ ಆಕೆಯ ಜೊತೆ ಸಂಪರ್ಕ ಕಡಿದುಕೊಂಡಿದ್ದ.

ಅನಂತರ ಮಕ್ಕಳ ಟಿಸಿ ಕಳುಹಿಸಿಕೊಡುತ್ತೇನೆ ಎಂದು ಹೇಳಿ ಪ್ರಿ ಸ್ಕೂಲ್‌ಗೆ ರಾಕೇಶ್‌ಗೆ ಬರ ಹೇಳಿದ್ದಾಳೆ. ಅಲ್ಲಿ ಆರೋಪಿಗಳಾದ ಸಾಗರ್‌, ಗಣೇಶ್‌ ಬೆದರಿಕೆ ಹಾಕಿದ್ದರು. ಇದೀಗ ರಾಕೇಶ್‌ ಸಿಸಿಬಿ ಪೊಲೀಸರಿಗೆ ದೂರನ್ನು ನೀಡಿದ್ದು, ದೂರಿನನ್ವಯ ಶ್ರೀದೇವಿ, ಅರುಣ್‌, ಸಾಗರ್‌ನನ್ನು ಬಂಧನ ಮಾಡಲಾಗಿದೆ.

Comments are closed.