Udupi: ಉಡುಪಿ: ಬ್ರಹ್ಮಾವರದಲ್ಲಿ ಭೀಕರ ರಸ್ತೆ ಅಪಘಾತ! ಬಾಲಕ ಮೃತ್ಯು!

Udupi: ಶಾಲೆಗೆಂದು ತೆರಳುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಸಮೀಪ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮೃತ ಬಾಲಕ ಸ್ಥಳೀಯ ಎಸ್ ಎಮ್ ಎಸ್ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿ ಬಾಲಕ ವಂಶಿ ಜಿ ಶೆಟ್ಟಿ(14) ಶಾಲೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕುಂದಾಪುರ ಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಸಾವನಪ್ಪಿದ್ದಾನೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.