of your HTML document.

Rare Case: ಪತಿಗೆ ಲೈಂಗಿಕ ಸಂಬಂಧದಲ್ಲಿ ಆಸಕ್ತಿ ಇಲ್ಲ: ಮಹಿಳೆಗೆ ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್

Rare Case: ಪತಿ ಲೈಂಗಿಕ ಸಂಬಂಧ, ಕುಟುಂಬ ಜೀವನದಲ್ಲಿ ಆಸಕ್ತಿ ತೋರಿಸುತ್ತಿಲ್ಲ, ಬಲವಂತವಾಗಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದ ಮಹಿಳೆಗೆ ವಿಚ್ಛೇದನ ಮಂಜೂರು(Divorce) ಮಾಡಿದ್ದನ್ನು ಕೇರಳ ಹೈಕೋರ್ಟ್(Kerala High Court) ಎತ್ತಿಹಿಡಿದಿದೆ. “ಆಧ್ಯಾತ್ಮಿಕ ಜೀವನ ಅಳವಡಿಸಿಕೊಳ್ಳುವಂತೆ ಪತ್ನಿಗೆ(Husband) ಒತ್ತಾಯಿಸಿ ಭಾವನಾತ್ಮಕ ಒತ್ತಡ ಹಾಕುವುದು ಮಾನಸಿಕ ಕ್ರೌರ್ಯಕ್ಕೆ ಸಮ. ಕುಟುಂಬ ಜೀವನದಲ್ಲಿ ಆಸಕ್ತಿ ಇಲ್ಲದಿರುವುದು, ಪತಿ ವೈವಾಹಿಕ ಕರ್ತವ್ಯ ಪೂರೈಸುವಲ್ಲಿ ವಿಫಲನಾಗಿದ್ದಾನೆಂಬುದನ್ನು(Marital Duties) ಸೂಚಿಸುತ್ತೆ” ಎಂದು HC ಹೇಳಿದೆ.

ಕೇರಳ ಹೈಕೋರ್ಟ್ನ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮತ್ತು ನ್ಯಾಯಮೂರ್ತಿ ಎಂ ಬಿ ಸ್ನೇಹಲತಾ ಅವರ ವಿಭಾಗೀಯ ಪೀಠವು, ಪತಿಗೆ ಕುಟುಂಬ ಜೀವನದಲ್ಲಿ ನಿರಾಸಕ್ತಿ ಇರುವುದು ಅವರ ವೈವಾಹಿಕ ಕರ್ತವ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ. ಇದಕ್ಕೂ ಮೊದಲು, ಪತ್ನಿ ಸಲ್ಲಿಸಿದ ಅರ್ಜಿಯ ಮೇರೆಗೆ ಕುಟುಂಬ ನ್ಯಾಯಾಲಯ ದಂಪತಿಗೆ ವಿಚ್ಛೇದನ ನೀಡಿತು. ಇದರ ನಂತರ, ಪತಿ ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಅನ್ನು ಸಂಪರ್ಕಿಸಿದರು.

ಲೈಂಗಿಕತೆಯಿಂದ ದೂರವಿರುವುದರ ಜೊತೆಗೆ, ತನ್ನ ಪತಿ ಪಿಜಿ ಕೋರ್ಸ್‌ಗೆ ಸೇರಲು ಅವಕಾಶ ನೀಡಲಿಲ್ಲ ಮತ್ತು ಮೂಢನಂಬಿಕೆ ಮತ್ತು ಸುಳ್ಳು ನಂಬಿಕೆಗಳ ಆಧಾರದ ಮೇಲೆ ಜೀವನವನ್ನು ನಡೆಸಲು ಒತ್ತಾಯಿಸಿದ್ದಾನೆ ಎಂದು ಪತ್ನಿ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಳು. ತನ್ನ ಪತಿ ಆಗಾಗ್ಗೆ ತೀರ್ಥಯಾತ್ರೆಗಳಿಗೆ ಹೋಗುತ್ತಿದ್ದರು, ತಮ್ಮನ್ನು ಒಂಟಿಯಾಗಿ ಬಿಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಅವರು ತಮ್ಮಿಂದ ವಿಚ್ಛೇದನ ಬಯಸಿ ಸಂದೇಶಗಳನ್ನು ಕಳುಹಿಸಿದ್ದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ

Comments are closed.