Shivmogga- Koppal: ರಂಜಾನ್ ಪ್ರಾರ್ಥನೆ ವೇಳೆ ಪ್ಯಾಲಿಸ್ತೀನ್ ಪರ ಘೋಷಣೆ!!

Shivmogga- Koppal: ಈದ್-ಅಲ್-ಫಿತರ್ ಅನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಸೀದಿಗಳಿಗೆ ತೆರಳಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸಿದ್ದಾರೆ. ಕೆಲವೆಡೆ ಈ ಹಬ್ಬ ಕೋಮು ಸೌಹಾರ್ದತೆಗೆ ಕಾರಣವಾಗಿದೆ. ಆದ್ರೆ ಶಿವಮೊಗ್ಗ ಜಿಲ್ಲೆ ಸಾಗರದ ಈದ್ಗಾ ಮೈದಾನದಲ್ಲಿ ಮತ್ತು ಕೊಪ್ಪಳದಲ್ಲಿ ನಮಾಜ್ ಬಳಿಕ ಎಸ್ಡಿಪಿಐ ‘ಪ್ಯಾಲೆಸ್ತೀನ್ ಫ್ರೀ’ ನಾಮಫಲಕ ಪ್ರದರ್ಶನ ಮಾಡಿತು.
ಶಿವಮೊಗ್ಗ ಮಾತ್ರವಲ್ಲದೆ ಕೊಪ್ಪಳದ ಗಂಗಾವತಿಯಲ್ಲಿ ಬೆಳಗ್ಗೆ ಪ್ರಾರ್ಥನೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಯಿತು. ಪ್ಯಾಲೆಸ್ತೀನ್ ಪರ ಮತ್ತು ವಕ್ಫ್ ತಿದ್ದುಪಡಿ ಬಿಲ್ ವಿರುದ್ಧ ಘೋಷಣೆಗಳನ್ನು ಕಿಡಿಗೇಡಿಗಳು ಹಾಕಿದರು.
ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದ ಆರು ಮಂದಿ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದರು.
Comments are closed.