Price hike: ಔಷಧಿಗಳ ಬೆಲೆ ಏರಿಕೆ: ಜ್ವರ, ಶುಗರ್ ಸೇರಿದಂತೆ ಬರೋಬ್ಬರಿ 900 ಔಷಧಿಗಳ ಬೆಲೆ ದುಬಾರಿ

Price hike: ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ. ದೇಶ(country), ರಾಜ್ಯ(State) ಎನ್ನದೆ ಯಾವುದೇ ಭೇದ ಭಾವ ಇಲ್ಲದೆ ಸರ್ಕಾರಗಳು(Govt) ಬೆಲೆ ಏರಿಕೆಯ ಜಿದ್ದಿಗೆ ಬಿದ್ದಿವೆ. ಇದೀಗ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಏಪ್ರಿಲ್ 1 ರಿಂದ ಗಂಭೀರ ಸೋಂಕುಗಳು, ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಬಳಸುವ ಔಷಧಿಗಳು ಸೇರಿದಂತೆ 900 ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯನ್ನು 1.74% ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ.
ಔಷಧಿಗಳ ಬೆಲೆಗಳನ್ನು ನಿಯಂತ್ರಿಸುವ ಔಷಧಗಳ ಆದೇಶ, 2013 (DPCO) ಅಡಿಯಲ್ಲಿ ವಾರ್ಷಿಕ ಪರಿಷ್ಕರಣೆಯ ಭಾಗವಾಗಿ ಈ ಬೆಲೆಯನ್ನು ಏರಿಸಲಾಗಿದೆ. ಔಷಧ ಕಂಪನಿಗಳು ಗರಿಷ್ಠ ಚಿಲ್ಲರೆ ಬೆಲೆಯನ್ನು ಪರಿಷ್ಕರಿಸಬಹುದು ಮತ್ತು ಇದಕ್ಕಾಗಿ ಅವರಿಗೆ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.
ವಾರ್ಷಿಕ ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿ 2024-25ನೇ ಸಾಲಿನ ಅಗತ್ಯ ಔಷಧಿಗಳ ಗರಿಷ್ಠ ಬೆಲೆಗಳನ್ನು 0.00551% ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಹೊಸ ಔಷಧಿಗಳ ಚಿಲ್ಲರೆ ಬೆಲೆಯನ್ನು NPPA ಸಹ ನಿಗದಿಪಡಿಸುತ್ತದೆ
Comments are closed.