Shivamogga: ಶಿವಮೊಗ್ಗ: ಮಹಿಳೆ ಸ್ನಾನ ಮಾಡುವಾಗ ಇಣುಕಿ ನೋಡಿದ ಕಾಮುಕ ಅರೆಸ್ಟ್

Share the Article

Shivamogga: ಶಿವಮೊಗ್ಗ (Shivamogga) ಜಿಲ್ಲೆ ಭದ್ರಾವತಿಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವಾಗ ಇಣುಕಿ ನೋಡಿದ ವ್ಯಕ್ತಿಯನ್ನು ಪೊಲೀಸರು ಬಂದಿಸಿದ್ದಾರೆ.

ಗೌರಪುರ ನಿವಾಸಿ ಮನೋಜ್(25) ಬಂಧಿತ ಆರೋಪಿ. ಸೋಮವಾರ ಮಧ್ಯಾಹ್ನ ಮಹಿಳೆ ಸ್ನಾನ ಮಾಡುವುದನ್ನು ಇಣುಕಿ ನೋಡುತ್ತಿದ್ದಾಗ ಆಕೆಯ ಪತಿ ಗಮನಿಸುವುದನ್ನು ಕಂಡು ಕೂಡಲೇ ಮನೋಜ್ ಅಲ್ಲಿಂದ ಪರಾರಿಯಾಗಿದ್ದಾನೆ. ಹೊಸಮನೆ ಪೊಲೀಸ್‌ ಠಾಣೆಗೆ ಈ ಕುರಿತು ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮನೋಜ್ ನನ್ನು ಬಂಧಿಸಿದ್ದಾರೆ.

Comments are closed.