Bengaluru: ಪಾಲಿಬೆಟ್ಟದ ಗೀತಾ ನಾಯ್ಡುಗೆ “ಕರ್ನಾಟಕ ಇನ್ ಸ್ಪೈರಿಂಗ್ ವುಮೆನ್ 2025” ಪ್ರಶಸ್ತಿ

Bengaluru: ಬಹುಮುಖ ಪ್ರತಿಭೆ ಪಾಲಿಬೆಟ್ಟದ ಟಿ.ಸಿ ಗೀತಾ ನಾಯ್ಡು ಅವರಿಗೆ ಬೆಂಗಳೂರು (Bengaluru) ಪ್ರೆಸ್ ಕ್ಲಬ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಕರ್ನಾಟಕ ಇನಸ್ಪೈರ್ರಿಂಗ್ ವುಮೆನ್ – 2025’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2023ರಿಂದ ದಕ್ಷಿಣ ಕೊಡಗಿನ ಬಾಳೆಲೆಯ ಪ್ರತಿಭಾ ಎಜುಕೇಷನಲ್ ಇನ್ಸ್ಟಿಟ್ಯೂಟಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿರುವ ಗೀತಾ ನಾಯ್ಡು ಅವರು ಪೊನ್ನಂಪೇಟೆ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ, ವಿರಾಜಪೇಟೆ ತಾಲೂಕಿನ ವಿಕಾ ಗ್ರೀನ್ ಅಂಬಾಸಿಡರ್ ಆಗಿ, ಹಾಕಿ ಮತ್ತು ಕ್ರಿಕೆಟ್ ಪಂದ್ಯಗಳ ವರದಿಗಾರ್ತಿಯಾಗಿ, ಮೆಂಟಲ್ ಎಬಿಲಿಟಿ ತರಬೇತುದಾರರಾಗಿ, ನಿರೂಪಕಿಯಾಗಿ, ಧರ್ಮಸ್ಥಳ ಸಂಘದ ಮಹಿಳೆಯರ ಪ್ರೇರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.

ವಿದ್ಯಾರ್ಥಿ ಆಗಿದ್ದಾಗಲೇ 200 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಕರ್ನಾಟಕ ಪ್ರಾಂತೀಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಗೌರವವನ್ನು, ಇನ್ಸ್ಪಿರೇಷನಲ್ ವುಮನ್ ಪ್ರಶಸ್ತಿ, 2024ರಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಮಲ್ಟಿ ಟಾಲೆಂಟೆಡ್ ವುಮನ್ ಪ್ರಶಸ್ತಿ, ‘Best Anchor of Kodagu ಪ್ರಶಸ್ತಿ, ಸೇವಾ ಮಾಣಿಕ್ಯ’ ಪ್ರಶಸ್ತಿ, ಗುರುಕುಲ ಗಗನ ಕುಸುಮ ರಾಜ್ಯ ಪ್ರಶಸ್ತಿ, 2023ರಲ್ಲಿ ಸ್ವಾಮಿ ವಿವೇಕಾನಾಂದ ಸದ್ಭಾವನಾ ರಾಜ್ಯ ಪುರಸ್ಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ, ಲಯನ್ಸ್ ಇಂಟರ್ನ್ಯಾಶನಲ್ ಕ್ಲಬ್ ವತಿಯಿಂದ ಉತ್ತಮ ಉಪನ್ಯಾಸಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Comments are closed.