Water Problem: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಲ: ನೀರು ಬಿಡುಗಡೆಗಾಗಿ ಮಹಾರಾಷ್ಟ್ರಕ್ಕೆ ಪತ್ರ ಬರೆದ ಸಿಎಂ
Water Problem: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ(Heat Wave) ಏರುತ್ತಿದೆ. ಅಲ್ಲಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರು, ಅದು ಅರೆಕಾಸಿನ ಮಜ್ಜಿಗೆ ಅಷ್ಟೆ. ಮಳೆಗಾಲ(Rain Season) ಆರಂಭಕ್ಕೆ ಇನ್ನು ಎರಡು ತಿಂಗಳ ಕಾಲ ಇದೆ. ಅಲ್ಲಿಯವರೆಗೆ ಬಿಸಿಲಿನ ತಾಪ, ನೀರಿನ ಕೊರತೆ(Water scarcity) ಕಾಡುವುದು ಖಂಡಿತ. ಈಗಾಗಲೇ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಕರ್ನಾಟಕ(North Karnataka) ಭಾಗದ ಜಿಲ್ಲೆಯ ಜನ- ಜಾನುವಾರುಗಳು ಸಂಕಷ್ಟಕ್ಕೆ ಅನುಭವಿಸುತ್ತಿದ್ದಾರೆ.
ಹಾಗಾಗಿ ಮಹಾರಾಷ್ಟ್ರದ(Maharashtra) ಕೊಯ್ನಾ ಮತ್ತು ಉಜ್ಜಿನಿ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ(CM Siddaramaiah) ಅವರು ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜನರು ಹೆಚ್ಚುತ್ತಿರುವ ತಾಪಮಾನ ಮತ್ತು ಖಾಲಿಯಾದ ಜಲಾಶಯಗಳಿಂದಾಗಿ ಕುಡಿಯುವ ನೀರಿನ ಬಿಕ್ಕಟ್ಟನ್ನು ಜಾನುವಾರುಗಳೂ ಸಹ ಎದುರಿಸುವಂತಾಗಿದೆ.
ಸಂಕಷ್ಟದಲ್ಲಿರುವರ ಜನ ಮತ್ತು ಜಾನುವಾರುಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ನೀರು ಪೂರೈಸುವುದು ಅಗತ್ಯವೆಂದಿರುವ ಸಿಎಂ, ಭೀಮಾ ಮತ್ತು ಕೃಷ್ಣಾ ನದಿ ಮೂಲಕ ನೀರಿ ಹರಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಮಾರ್ಚ್ ನಿಂದ ಈ ಜಿಲ್ಲೆಗಳಲ್ಲಿ ನೀರಿ ಅಭಾವ ಎದುರಾಗಿದೆ ಎಂದು ಉಲ್ಲೇಖಿಸಿದ್ದಾರೆ.
https://x.com/CMofKarnataka/status/1907045705765785958/photo/1
Comments are closed.