of your HTML document.

Weight Loss Injection: ಭಾರತಕ್ಕೆ ಎಂಟ್ರಿ ಕೊಟ್ಟ ತೂಕ ಇಳಿಸುವ ಇಂಜೆಕ್ಷನ್ – ರೇಟ್ ಎಷ್ಟು ಗೊತ್ತಾ?

Weight Loss Injection: ಭಾರತೀಯರಲ್ಲಿ ಇಂದು ಸ್ತೂಲ ಕಾಯ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿರುವಾಗಲೇ ಇದನ್ನು ನಿಯಂತ್ರಿಸಬೇಕೆಂದು ಇತ್ತೀಚಿಗೆ ಕೇಂದ್ರ ಸರ್ಕಾರವು ಶಾಲಾ ಬಿಸಿ ಊಟದಲ್ಲಿ ಅಡುಗೆ ಎಣ್ಣೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವಂತೆ ಆದೇಶ ಹೊರಡಿಸಿತ್ತು. ಇನ್ನು ಜನರು ತೂಕ ಹಾಗೂ ಬೊಜ್ಜನ್ನು ಕರಗಿಸಲು ನಾನ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಈ ಬೆನ್ನಲ್ಲೇ ಇದೀಗ ಭಾರತಕ್ಕೆ ತೂಕ ಇಳಿಸುವಂತಹ ಇಂಜೆಕ್ಷನ್ ಎಂಟ್ರಿ ಕೊಟ್ಟಿದೆ.

ಹೌದು, ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ ಮತ್ತು ಬೊಜ್ಜು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ಔಷಧ ಕಂಪನಿ ಎಲಿ ಲಿಲ್ಲಿ ಹೊಸ ಔಷಧವನ್ನು ಬಿಡುಗಡೆ ಮಾಡಿದೆ. ಇಂಜೆಕ್ಷನ್ ರೂಪದಲ್ಲಿರುವ ಇದರ ಹೆಸರು ಮೊಂಜಾರೊ ಎಂದು. ಇದರ 2.5 ಮಿಗ್ರಾಂ ಬಾಟಲಿಯ ಬೆಲೆ 3,500 ರೂ. ಮತ್ತು 5 ಮಿಗ್ರಾಂ ಬಾಟಲಿಯ ಬೆಲೆ 4,375 ರೂ. ದರ ನಿಗದಿಪಡಿಸಲಾಗಿದೆ.

ಇನ್ನು ಔಷಧಿ ಚಿಕಿತ್ಸೆಗೆ ತಿಂಗಳಿಗೆ 14,000 ರಿಂದ 17,500 ರೂ. ವೆಚ್ಚವಾಗುತ್ತದೆ. ಒಬ್ಬ ವ್ಯಕ್ತಿ ಒಂದು ತಿಂಗಳ ಕಾಲ ಡೋಸ್ ತೆಗೆದುಕೊಂಡರೆ, ಅವನು 14,000 ರಿಂದ 18,000 ರೂ.ಗಳವರೆಗೆ ಖರ್ಚು ಮಾಡಬೇಕಾಗುತ್ತದೆ. ಅಮೆರಿಕದಲ್ಲಿ ಈ ಔಷಧಿಯ ಬೆಲೆ 86,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ಇರುತ್ತದೆ. ಆದರೆ ಭಾರತದಲ್ಲಿ ಇದನ್ನು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಲಾಗಿದೆ.

ಔಷಧ ಹೇಗೆ ಕೆಲಸ ಮಾಡುತ್ತದೆ?

ಈ ಔಷಧಿಯು ದೇಹದಲ್ಲಿ ಎರಡು ಪ್ರಮುಖ ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತದೆ, ಅವುಗಳೆಂದರೆ GIP (ಗ್ಲೂಕೋಸ್-ಅವಲಂಬಿತ ಇನ್ಸುಲಿನೋಟ್ರೋಪಿಕ್ ಪೆಪ್ಟೈಡ್) ಮತ್ತು GLP-1 (ಗ್ಲುಕಗನ್ ತರಹದ ಪೆಪ್ಟೈಡ್-1). ಈ ಹಾರ್ಮೋನುಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಔಷಧಿಯನ್ನು ವಿಶೇಷವಾಗಿ ಟೈಪ್-2 ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆಗಾಗಿ ಬಳಸಲಾಗುತ್ತದೆ. 15 ಮಿಗ್ರಾಂ ಡೋಸ್ ತೆಗೆದುಕೊಂಡ ರೋಗಿಗಳು ಸರಾಸರಿ 21.8 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಕ್ಲಿನಿಕಲ್ ಪ್ರಯೋಗಗಳು ಕಂಡುಕೊಂಡಿವೆ, ಆದರೆ 5 ಮಿಗ್ರಾಂ ಡೋಸ್ ತೆಗೆದುಕೊಂಡವರು 15.4 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

Comments are closed.