of your HTML document.

Udupi: ಉಡುಪಿ: ಸಿದ್ದಾಪುರದಲ್ಲಿ ಲಿಂಗಮುದ್ರೆ ಕಲ್ಲು ಪತ್ತೆ!

Udupi: ಉಡುಪಿ (Udupi) ಜಿಲ್ಲೆ ಕುಂದಾಪುರ ತಾಲೂಕು ಸಿದ್ದಾಪುರದ, ಸಿದ್ದಾಪುರ-ಹೊಸಂಗಡಿ ರೋಟರಿ ಕ್ಲಬ್, ಸಣ್ಣಯ್ಯ ಯಡಿಯಾಳ ಸಭಾಭವನದ ಮುಂಭಾಗವಿರುವ, ಅರವಿಂದ ಶೆಟ್ಟಿಯವರ ಸೈಟ್ ನಲ್ಲಿ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ.

ಈ ಕಲ್ಲಿನ ಮಾಹಿತಿಯು, ಸಿದ್ದಾಪುರ ವಾಸುಕಿ ಕ್ಲಿನಿಕ್ ಡಾ. ಜಗದೀಶ್ ಶೆಟ್ಟಿಯವರಿಂದ ತಿಳಿದು ಬಂದ ಹಿನ್ನಲೆಯಲ್ಲಿ ತುಮಕೂರು ವಿ.ವಿಯ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ವೈಶಾಲಿ ಜಿ. ಆರ್ ಸಿದ್ದಾಪುರ, ಇವರು ಸ್ಥಳಕ್ಕೆ ಭೇಟಿ ನೀಡಿ, ಮುಳ್ಳು ಗಿಡಗಳಿಂದ ಅವರಿಸಿದ್ದ ಈ ಕಲ್ಲನ್ನು, ರೋಟರಿ ಮಾಜಿ ಅಧ್ಯಕ್ಷರಾಗಿದ್ದ ಡಿ ನಾಗೇಂದ್ರ ಯಡಿಯಾಳ ಹಾಗೂ ಶಿಕ್ಷಕಿ ಕೃಷ್ಣವೇಣಿಯವರ ಸಹಾಯದಿಂದ ಈ ಕಲ್ಲಿನ ಸುತ್ತಮುತ್ತ ಸ್ವಚ್ಛಗೊಳಿಸಿ ಕಲ್ಲನ್ನು ಪರೀಕ್ಷಿಸಲಾಗಿ ಈ ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಅದರ ಕೆಳಭಾಗದಲ್ಲಿ ಶಿವಲಿಂಗದ ಕೆತ್ತನೆ ಇರುವುದು ಕಂಡು ಬಂದಿದೆ. ಈ ಕಲ್ಲು ಸುಮಾರು ಎರಡುವರೆ ಅಡಿ ಎತ್ತರವಿದ್ದು, ಒಂದು ಅಡಿ ಅಗಲವಿದೆ, ಸುಮಾರು ಎರೆಡು ಅಡಿ ಆಳ ಕೆಳಗೆ ಇದ್ದಿರಬಹುದು. ಈ ಭಾಗದಲ್ಲಿ ಈ ಕಲ್ಲನ್ನು ಶಿಲೆಕಲ್ಲು ಎಂದು ಕರೆಯುತ್ತಾರೆ.

ಶಾಸನ ತಜ್ಞರಾದ ಪ್ರೊ. ಎಂ ಕೊಟ್ರೇಶ್, ಅಧ್ಯಕ್ಷರು, DOSR ಇತಿಹಾಸ ಮತ್ತು ಪುರಾತತ್ವ ವಿಭಾಗ ತುಮಕೂರು ವಿ.ವಿ ಇವರಿಗೆ ತಿಳಿಸಲಾಗಿ,
ಈ ಕಲ್ಲಿನಲ್ಲಿ ಯಾವುದೇ ಬರವಣಿಗೆ ಕಂಡುಬಂದಿಲ್ಲ. ತಮ್ಮ ಗಡಿಗಳನ್ನು ಗುರುತಿಸಲು ಶೈವರು ಲಿಂಗ ಮುದ್ರೆ ಕಲ್ಲನ್ನು, ವೈಷ್ಣವರು ವಾಮನ ಮುದ್ರೆ ಕಲ್ಲನ್ನು ಹಾಗೂ ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕಿಸುತ್ತಿದ್ದರು. ಇದು ಲಿಂಗ ಮುದ್ರೆ ಕಲ್ಲಾಗಿದೆ ಎಂದು ತಿಳಿಸಿದ್ದಾರೆ.

Comments are closed.