Coconut : ಒಂದು ತೆಂಗಿನ ಕಾಯಿ ಬೆಲೆ 70ರೂ!!

Coconut : ತೆಂಗಿನಕಾಯಿ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಬ್ಬರಿ ಕ್ವಿಂಟಾಲ್‌ಗೆ 19 ಸಾವಿರ ರೂ. ದಾಟುವ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ದಿನದಿಂದ ದಿನಕ್ಕೆ ನಿಧಾನವಾಗಿ ಕೊಬ್ಬರಿ ಬೆಲೆ ಏರುತ್ತಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.
ಇಷ್ಟು ಮಾತ್ರವಲ್ಲದೆ ಒಂದು ತೆಂಗಿನ ಕಾಯಿ ಬೆಲೆ ಬರೋಬ್ಬರಿ 70 ರೂಪಾಯಿ ಆಗಿದೆ. ಯುಗಾದಿ ಹಬ್ಬದ ಪ್ರಯುಕ್ತ ತೆಂಗಿನ ಕಾಯಿ 60-70 ರೂ.ಗೆ ಏರಿಕೆಯಾಗಿದೆ. ಇದೇ ತೆಂಗಿನ ಕಾಯಿ ಕೆಲವು ತಿಂಗಳ ಹಿಂದೆ 30-35 ರೂ. ಇತ್ತು. ಇಂದು ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದು ಗ್ರಾಹಕರ ಕೈ ಸುಡುತ್ತಿದೆ. ಜೊತೆಗೆ ಬೆಳೆಗಾರರಿಗೆ ಸಂತಸ ತಂದಿದೆ.
ಅಂದಹಾಗೆ ಕಳೆದ 2014-15ರಲ್ಲಿ 19 ಸಾವಿರ ಗರಿಷ್ಠ ಬೆಲೆ ಪಡೆದಿದ್ದು ಈವರೆಗೆ ದಾಖಲೆಯಾಗಿತ್ತು. ಆದ್ರೆ ಈಗ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ 19,051 ರೂ.ಗೆ ಮಾರಾಟವಾಗುವ ಮೂಲಕ ಈ ಹಿಂದಿನ ದಾಖಲೆ ಮುರಿದಿದೆ.
Comments are closed.