Holiday: ನಾಳೆಯೂ ಶಾಲಾ – ಕಾಲೇಜುಗಳಿಗೆ ರಜೆ !! ರಾಜ್ಯ ಸರ್ಕಾರ ಘೋಷಣೆ

Holiday: ದೇಶಾದ್ಯಂತ ಶಾಲಾ ಕಾಲೇಜು ವಿದ್ಯಾರ್ಥಿಗಳು ಎರಡು ದಿನದ ರಜೆಯನ್ನು ಸಕ್ಕತ್ ಎಂಜಾಯ್ ಮಾಡಿದ್ದಾರೆ. ಇನ್ನು ಕೆಲವೆಡೆ ಶನಿವಾರವೂ ಕೂಡ ರಜೆ ಇದ್ದು, ಮೂರು ದಿನವು ರಜೆ ಸಿಕ್ಕಂತೆ ಆಗಿದೆ. ಈ ಬೆನ್ನಲ್ಲೇ ಮತ್ತೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ನಾಳೆಯೂ ಕೂಡ ಅಂದರೆ ಏಪ್ರಿಲ್, 1 ಮಂಗಳವಾರವು ಶಾಲಾ ಕಾಲೇಜುಗಳಿಗೆ ರಜೆ ಇರಲಿದೆ ಎಂಬ ಸುದ್ದಿ ಬಂದಿದೆ.
ಹೌದು, ಇಂದು ರಂಜಾನ್ ಸಂದರ್ಭದಲ್ಲಿ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಮರುದಿನ ಅಂದರೆ ನಾಳೆ ಆಂಧ್ರಪ್ರದೇಶ ಸರ್ಕಾರವು ಏಪ್ರಿಲ್ 1 ಅನ್ನು ಐಚ್ಛಿಕ ರಜಾದಿನವೆಂದು ಘೋಷಿಸಲಾಗಿದೆ. ಇದೀಗ ಆಂಧ್ರಪ್ರದೇಶ ಸರ್ಕಾರದ ಕಾರ್ಯದರ್ಶಿ ಕೆ. ವಿಜಯಾನಂದ್ ಅವರು ಮಂಗಳವಾರ ಐಚ್ಛಿಕ ರಜೆ ಘೋಷಿಸುವ ಸರ್ಕಾರಿ ಆದೇಶಗಳನ್ನು (637) ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆಯೂ ಕೂಡ ಆಂಧ್ರಪ್ರದೇಶದ ಎಲ್ಲಾ ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆಯನ್ನು ನೀಡಲಾಗಿದೆ.
ಇಷ್ಟೇ ಅಲ್ಲದೆ ರಾಜ್ಯಾದ್ಯಂತ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ. ಮತ್ತೊಂದೆಡೆ, ತೆಲಂಗಾಣದಲ್ಲಿ ಏಪ್ರಿಲ್ 1 ರಂದು ಈಗಾಗಲೇ ಸಾರ್ವಜನಿಕ ರಜೆ ಇದೆ. ವಾರ್ಷಿಕ ದಾಸ್ತಾನು ಇರುವುದರಿಂದ ಆ ದಿನದಂದು ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ.
Comments are closed.