Food: ಹಾಲಿನ ದರ ಏರಿಕೆಯ ಬೆನ್ನಲ್ಲೇ, ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆಯ ನಿರ್ಧಾರ!

Food: ರಾಜ್ಯ ಸರಕಾರ ಹಾಲಿನ ದರ ಲೀಟರ್ ಗೆ ನಾಲ್ಕು ರೂಪಾಯಿ ಏರಿಕೆ ಮಾಡಿದ್ದು, ಇದೀಗ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರು ತೀರ್ಮಾನಿಸಿದ್ದಾರೆ.
ಏಪ್ರಿಲ್ 1ರಿಂದ ಹಾಲಿನ ದರ ನಾಲ್ಕು ರೂಪಾಯಿ ಏರಿಕೆಯಾಗಲಿದ್ದು, ವಿದ್ಯುತ್ ಮತ್ತು ಹಾಲಿನ ದರದ ಹೆಚ್ಚಳ ಹೋಟೆಲ್ ಉದ್ಯಮವನ್ನು ನಷ್ಟಕ್ಕೆ ದೂಡಲಿದೆ ಎನ್ನಲಾಗಿದೆ.
ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ, ಪ್ರಯಾಣ ಟಿಕೆಟ್ ದರ ಏರಿಕೆ ಕಂಡಿದ್ದು ಹೋಟೆಲ್ ಉದ್ಯಮ ನಷ್ಟ ಅನುಭವಿಸುತ್ತಿದ್ದು,. ಆದ್ದರಿಂದ ತಿಂಡಿ ತಿನಿಸುಗಳ (Food) ಬೆಲೆ ಶೇಕಡ 10 ರಿಂದ 15 ರಷ್ಟು ಏರಿಕೆ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
Comments are closed.