Elephant attack: ಕಾಡಾನೆ ದಾಳಿಗೆ ರೈತ ಸಾವು!

Elephant attack: ಕಾಡಾನೆ ದಾಳಿಯಿಂದಾಗಿ (Elephant attack) ರೈತ ಮೃಪಟ್ಟಿರುವ ಘಟನೆ ಚಿಕ್ಕಮಗಳೂರು
ಜಿಲ್ಲೆಯ ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಮೃತ ರೈತನನ್ನು ವೆಂಕಟೇಶ್ (58) ಎಂದು ಗುರುತಿಸಲಾಗಿದೆ. ವೆಂಕಟೇಶ್ ಮುಂಜಾನೆ ಕತ್ತಲಿದ್ದ ಕಾರಣ ಅಲ್ಲಿ ಕಾಡಾನೆ ಇದ್ದ ವಿಚಾರ ತಿಳಿಯದೇ ಮನೆ ಮುಂದೆ ಹಸು ಕಟ್ಟುತ್ತಿದ್ದರು. ಈ ವೇಳೆ ಆನೆ ಉಸಿರಾಡುವ ಸದ್ದು ಕೇಳಿ ಮೊಬೈಲ್‌ನಿಂದ ಟಾರ್ಚ್ ಲೈಟ್ ಹಾಕಿದ್ದಾರೆ. ಲೈಟ್ ಹಾಕಿದ ತಕ್ಷಣ ಆನೆ ಸೊಂಡಿಲಿನಿಂದ ರೈತನನ್ನು ಹಿಡಿದು ಮರಕ್ಕೆ ಹೊಡೆದಿದೆ. ಪರಿಣಾಮ ರೈತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.