Dharawada: ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸಾವಿನ ಭವಿಷ್ಯ ಹೇಳಿದ್ದ ಧಾರವಾಡ ಗೊಂಬೆಗಳಿಂದ ಸಿಎಂ ಸಿದ್ದು ಕುರಿತು ಸ್ಪೋಟಕ ಭವಿಷ್ಯ!!

Dhaawada: ಧಾರವಾಡದ ಗೊಂಬೆಗಳ ಭವಿಷ್ಯ ತುಂಬಾನೇ ಮಹತ್ವ ಪಡೆದಿದೆ. ನೂರು ವರ್ಷಗಳ ಇತಿಹಾಸವನ್ನ ಹೊಂದಿರುವ ಹನುಮನಕೊಪ್ಪದ ಬೊಂಬೆ ಭವಿಷ್ಯವು ಬಹುತೇಕವಾಗಿ ನಿಜವೇ ಆಗಿದೆ. ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಸಾವಿನ ಬಗ್ಗೆಯೇ ಈ ಧಾರವಾಡ ಗೊಂಬೆಗಳು ಭವಿಷ್ಯ ನುಡಿದಿದ್ದವು. ಇದೀಗ ಈ ಧಾರವಾಡದ ಗೊಂಬೆಗಳೇ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಭವಿಷ್ಯವನ್ನು ನುಡಿದಿವೆ.
ಹೌದು, ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಕುರಿತು ಭವಿಷ್ಯ ಹೇಳಿದ ಈ ಗೊಂಬೆಗಳು ‘ಈ ವರ್ಷ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಕುರ್ಚಿ ಯೋಚನೆ ಬೇಡ ಎಂದು ಗೊಂಬೆಗಳು ಭವಿಷ್ಯ ನುಡಿದಿವೆ. ಕಳೆದ ಸಲವೂ ಗೊಂಬೆಗಳು ಇದೇ ಮುನ್ಸೂಚನೆ ನೀಡಿದ್ದವು.
ಇನ್ನು ಕೇಂದ್ರದ ರಾಜಕೀಯ ವಿಚಾರಗಳಿಗೆ ಬಂದ್ರೆ, ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುತ್ತದೆ. ಇನ್ನು ನಮ್ಮ ಪಕ್ಕದ ಗೋವಾ, ಕೇರಳ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ಆಗಬಹುದು. ಗೋವಾ, ಕೇರಳ ದಿಕ್ಕಿನ ಸೇನಾಧಿಪತಿಗೆ ಧಕ್ಕೆಯಾಗಲಿದೆ. ಈ ಹಿನ್ನೆಲೆ ಗೋವಾ ರಾಜ್ಯ ರಾಜಕಾರಣಕ್ಕೆ ಧಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಅಂದಹಾಗೆ ಸುಮಾರು 100 ವರ್ಷಗಳ ಭವಿಷ್ಯದ ಇತಿಹಾಸ ಹೊಂದಿರುವ ಬೊಂಬೆಗಳು ಈ ಹಿಂದೆ ಇಂದಿರಾ ಗಾಂಧಿ ಹತ್ಯೆ, ರಾಜೀವ್ ಗಾಂಧಿ ಸಾವಿನ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಜೊತೆಗೆ, ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ವರ್ಷವೂ ಬೊಂಬೆ ಹೇಳಿದ್ದು ನಿಜವಾಗಿತ್ತು.
Comments are closed.