of your HTML document.

CM Medal: ಸಶಸ್ತ್ರ ಪೊಲೀಸ್ ಪಡೆಯ ಹೆಡ್ ಕಾನ್ಸ್ಟೆಬಲ್ ಮಾಯಮುಡಿಯ ರಾಚಪ್ಪರವರಿಗೆ ಮುಖ್ಯಮಂತ್ರಿ ಪದಕ

CM Medal: ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು(Kodagu) ಜಿಲ್ಲೆ ಪೊನ್ನಂಪೇಟೆ ತಾಲ್ಲೂಕು ಮಾಯಮುಡಿ ಗ್ರಾಮದ ವಿ.ಎಸ್. ರಾಚಪ್ಪ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ವಿ.ಎಸ್. ರಾಚಪ್ಪ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಭಯೋತ್ಪಾದನಾ ನಿಗ್ರಹ ಕೇಂದ್ರ (ಗರುಡ ಪಡೆ)ದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಾಯಮುಡಿ ಗ್ರಾಮದ ದಿವಂಗತ ವಿ.ಎ. ಶ್ರೀನಿವಾಸ್ ಮತ್ತು ವಿ.ಎಸ್. ಸುಲೋಚನಾರವರ ಪುತ್ರರಾಗಿದ್ದಾರೆ. NSGಯಲ್ಲಿ ಬಾಂಬ್ DISPOSAL ತರಬೇತಿ, PSO ತರಬೇತಿ, Commando ತರಬೇತಿ ಹಾಗೂ SNIPER ತರಬೇತಿಯನ್ನು ಪಡೆದಿರುವ ವಿ.ಎಸ್. ರಾಚಪ್ಪ ಅವರು Agnipariksha -3, 2016 ರಲ್ಲಿ ಕರ್ನಾಟಕ ಪೊಲೀಸ್ ತಂಡವು ಮೊದಲ ಸ್ಥಾನಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

2018 ಮತ್ತು 2019 ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಆಗಮಿಸಿದ್ದ ಗರುಡ ಪಡೆಯಲ್ಲಿಯೂ ರಾಚಪ್ಪ ಅವರು ಕರ್ತವ್ಯ ನಿರ್ವಹಿಸಿದ್ದರು. 2025ರಲ್ಲಿ AIPCC SNIPER COMPITATION ಹಾಗೂ AIPDM COMPITATION ಚೆನೈ ಗೆ ತೆರಳಿದ ಕರ್ನಾಟಕ ಪೊಲೀಸ್ ತಂಡದಲ್ಲಿಯೂ ಪಾಲ್ಗೊಂಡು ಉತ್ತಮ ಪ್ರದರ್ಶನವಿತ್ತಿದ್ದಾರೆ. ರಾಚಪ್ಪ ಅವರ ಈ ಎಲ್ಲ ಸಾಧನೆ ಹಾಗೂ ಸೇವಾ ದಕ್ಷತೆ ಮುಖ್ಯಮಂತ್ರಿ ಪದಕವನ್ನು ತಂದುಕೊಟ್ಟಿದೆ.

ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ವಿ.ಎಸ್. ರಾಚಪ್ಪ ಅವರು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರಿಂದ ಪದಕ ಸ್ವೀಕರಿಸಲಿರುವರು.

Comments are closed.