Belthangady: ಬೆಳ್ತಂಗಡಿ: ಪುತ್ತಿಲ ನಿವಾಸಿ ಪ್ರವೀಣ್ ಎಂ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಘೋಷಣೆ

Belthangady: ಅಪರಾಧ ಪತ್ತೆ ವಿಭಾಗದಲ್ಲಿ ಮಹತ್ವಪೂರ್ಣ ಸೇವೆ ಸಲ್ಲಿಸಿರುವ ಬೆಳ್ತಂಗಡಿ (Belthangady) ತಾಲೂಕಿನ ಪುತ್ತಿಲ ಗ್ರಾಮದ ಮೂರುಗೋಳಿ ನಿವಾಸಿ, ಪೊಲೀಸ್ ಹೆಡ್ ಕಾನ್ಸೆಬಲ್ ಪ್ರವೀಣ್ ಎಂ ಇವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕ ಘೋಷಣೆಯಾಗಿದೆ.
ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗ ದಂಪತಿಯ ಪುತ್ರರಾಗಿರುವ ಪ್ರವೀಣ್ ಎಂ ಅವರು 2002 ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೊಂಡು ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಇದೀಗ ಇವರಿಗೆ ಘೋಷಣೆಯಾದ ಈ ಪ್ರಶಸ್ತಿಯನ್ನು ಏಪ್ರಿಲ್ 2 ಎಂದು ನಡೆಯುವ ಪೊಲೀಸ್ ಧ್ವಜ ದಿನಾಚರಣೆಯಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ.
Comments are closed.