of your HTML document.

ರಾಜ್ಯವಾರು ಲೀಟ‌ರ್ ಹಾಲಿನ ದರ ಎಷ್ಟಿದೆ?

Bengaluru: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹4 ಹೆಚ್ಚಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯವಾರು ಹಾಲಿನ ದರ ಇರುವ ಪಟ್ಟಿಯೊಂದನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಟ್ಟಿಯ ಪ್ರಕಾರ, ಮೊದಲ ಸ್ಥಾನದಲ್ಲಿರುವ ಅಸ್ಸಾಂನಲ್ಲಿ ಲೀಟ‌ರ್ ಹಾಲಿನ ಬೆಲೆ ₹60 ಆಗಿದ್ದರೆ, ನಂತರದಲ್ಲಿರುವ ಹರಿಯಾಣದಲ್ಲಿ ₹56 ಆಗಿದೆ. ಕರ್ನಾಟಕ ಹನ್ನೊಂದನೇ ಸ್ಥಾನದಲ್ಲಿದ್ದು, ಇಲ್ಲಿ ₹42 ಇದೆ. “ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ಬೆಲೆ ಹೆಚ್ಚಿಸಲಾಗಿದೆ” ಎಂದು ಸಿಎಂ ಬರೆದುಕೊಂಡಿದ್ದಾರೆ.

Comments are closed.