ಹಸು ತೊಳೆಯಲು ಹೋದ ಮೂವರು ನೀರು ಪಾಲು

Nanjangud: ಯುಗಾದಿ ಹಬ್ಬದ ಮುನ್ನ ದಿನ ನಂಜನಗೂಡು ತಾಲೂಕಲ್ಲಿ ಭೀಕರ ದುರಂತ ಸಂಭವಿಸಿದ್ದು, ಮೂವರು ನೀರು ಪಾಲಾಗಿದ್ದಾರೆ. ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ಹಸು ತೊಳೆಯಲು ಕಾಲುವೆಗೆ ಹೋದ ಮೂವರು ನೀರಿನಲ್ಲಿ ಆಯತಪ್ಪಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ. ನೋಡ ನೋಡ್ತಿದ್ದಂತೆ ದುರಂತ ಸಂಭವಿಸಿದೆ.
ಹಸು ತೊಳೆಯಲು ಹೋದ ವಿನೋದ್, ಬಸವೇಗೌಡ, ಮುದ್ದೇಗೌಡ ನೀರಿನಲ್ಲಿ ಕೊಚ್ಚಿಹೋದ ದುರ್ದೈವಿಗಳಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮೆಟ್ಟಿಲಿನಿಂದ ಕಾಲು ಜಾರಿ ಓರ್ವರು ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಪ್ರಾಣ ಬಿಟ್ಟಿದ್ದಾರೆ. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Comments are closed.