ಹಿರಿಯ ಭೂ ಮಾಲೀಕರಿಗೆ ಸಿಗಲಿದೆ “ನನ್ನ ಭೂಮಿ” ಖಾತರಿ

Share the Article

Bengaluru: ಸಾಮಾನ್ಯವಾಗಿ ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ಭೂಮಿ ಮಂಜೂರಾಗಿ 50-60 ವರ್ಷ ಕಳೆದರೂ ಪಕ್ಕಾ ದಾಖಲೆ ಸಿಗದೇ,ಪೋಡಿ ದುರಸ್ತಿಯಾಗದೇ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು.ಆದ್ರೆ ಈಗ ಕಂದಾಯ ಇಲಾಖೆ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
‘ನನ್ನ ಭೂಮಿ’ ಎಂಬ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು ಅಧಿಕಾರಿಗಳೇ ಗ್ರಾಮಕ್ಕೆ ಹೋಗಿ ಸರ್ವೆ ನಡೆಸಿ ನಕ್ಷೆ, ಹೊಸ ಸರ್ವೆ ನಂಬ‌ರ್ ನೀಡಿ ಹೊಸ ಆರ್‌ಟಿಸಿ ಹಸ್ತಾಂತರಿಸುವ ಮೂಲಕ ‘ನನ್ನ ಭೂಮಿ’ ಎಂಬ ಖಾತರಿ ನೀಡುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಈ ಯೋಜನೆಯ 2025ರ ಏಪ್ರಿಲ್ ಅಂತ್ಯಕ್ಕೆ 20,000 ಕುಟುಂಬಗಳಿಗೆ ಸೌಲಭ್ಯ ಕಲ್ಪಿಸುವ ಗುರಿ ಇದೆ. ಆರು ತಿಂಗಳ ಕಾಲ ಈ ಅಭಿಯಾನ ಯಶಸ್ವಿಯಾಗಿ ನಡೆದರೆ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Comments are closed.