of your HTML document.

Kasaragodu : ಕುಡಿದು ಮಲಗಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ನಟ್ ಸಿಕ್ಕಿಸಿದ ಕಿಡಿಗೇಡಿಗಳು – ಎರಡು ದಿನ ನರಳಾಟ, ತೆಗೆದಿದ್ದು ಹೇಗೆ?

Kasaragodu : ಕಂಠಪೂರ್ತಿ ಕುಡಿದು ಮಲಗಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಕೆಲ ಕಿಡಿಗೇಡಿಗಳು ನಟ್ ಸಿಕಿಸಿದ್ದು, ಆತ ಎರಡು ದಿನ ನರಳಾಡಿದ ಬಳಿಕ ಅದನ್ನು ಹೊರತೆಗೆದ ವಿಚಿತ್ರ ವಿದ್ಯಮಾನ ಒಂದು ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಕಾಞಂಗಾಡ್‍ನಲ್ಲಿ 46 ವರ್ಷದ ವ್ಯಕ್ತಿ ಕುಡಿದ ಮತ್ತಿನಲ್ಲಿ ಮಲಗಿದ್ದಾಗ ಯಾರೋ ಆತನ ಜನನಾಂಗಕ್ಕೆ ಕಬ್ಬಿಣದ ನಟ್‌ವೊಂದನ್ನು ಸಿಲುಕಿಸಿದ್ದಾರೆ. ಇದರಿಂದ ನೋವು ಸಹಿಸಲಾರದೆ ಆತ ವೈದ್ಯರ ಬಳಿ ಹೋಗಿದ್ದಾನೆ. ಆದರೆ ವೈದ್ಯರಿಗೆ ಅದನ್ನು ತೆಗೆಯಲು ಆಗದ ಕಾರಣ ಅಗ್ನಿಶಾಮಕದಳದವರ ಮೊರೆ ಹೋಗಬೇಕಾಯಿತು.

ವ್ಯಕ್ತಿಯ ಶಿಶ್ನ ನಟ್‍ನೊಳಗೆ ಸಿಲುಕಿದ ಕಾರಣ ಮಾಂಸಖಂಡ ಊದಿಕೊಂಡು ಆತನಿಗೆ ಮೂತ್ರ ವಿಸರ್ಜನೆ ಮಾಡಲು ಆಗದೆ ಒದ್ದಾಡಿದ್ದಾನೆ. ಅಲ್ಲದೇ ಅದರ ನೋವನ್ನು ಸಹಿಸಲಾಗದೆ ಆತ ರಾತ್ರಿ 8 ಗಂಟೆ ಸುಮಾರಿಗೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ನಟ್ ಅನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾರೆ. ಆದರೆ ಅದು ಯಶಸ್ವಿಯಾಗಲಿಲ್ಲ. ಕೊನೆಗೆ ಆಸ್ಪತ್ರೆಯ ಅಧಿಕಾರಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಹಲವು ಗಂಟೆಗಳ ಪ್ರಯತ್ನದ ನಂತರ, ಆತನಿಗೆ ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ರಿಂಗ್‍ ಕಟ್ಟರ್‌ ಬಳಸಿ ನಟ್‍ ಅನ್ನು ಕತ್ತರಿಸುವ ಮೂಲಕ ಆತನ ನೋವಿಗೆ ಮುಕ್ತಿ ನೀಡಿದ್ದಾರೆ.

Comments are closed.